ಆರ್ ಆರ್ ನಗರದಲ್ಲಿ ರಂಗೇರಿದ ಉಪ ಚುನಾವಣೆ

0
1

ಬೆಂಗಳೂರು: ರಾಜರಾಜೇಶ್ವರಿ ನಗರ ಉಪ ಚುನಾವಣೆ ಮೂರು ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ತಮ್ಮ ಪಕ್ಷದ ನಾಯಕರು, ಶಾಸಕರ ಜೊತೆ ಭರ್ಜರಿ ಮತ ಬೇಟೆ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಕುಸುಮಾ ಹನುಮಂತರಾಯಪ್ಪ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಚಾರ ನಡೆಸಿದ್ರು. ಜಾಲಹಳ್ಳಿಯಲ್ಲಿ ರೋಡ್ ಶೋ ನಡೆಸಿ ತಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದ್ರು. ಡಿಕೆಶಿಗೆ ರಾಮಲಿಂಗಾ ರೆಡ್ಡಿ, ಆನೇಕಲ್ ಶಿವಣ್ಣ ಸಾಥ್ ನೀಡಿದ್ರು.

ಇನ್ನೂ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ ನಾಗಮಂಗಲ ಶಾಸಕ ಸುರೇಶ್ ಗೌಡ ಮತಯಾಚನೆ ಮಾಡಿದ್ರು. ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ್ತಿಕೆರೆ, ಜೆಪಿ ಪಾರ್ಕ್ ಏರಿಯಾಗಳಲ್ಲಿ ಏಕಾಂಗಿಯಾಗಿ ಪ್ರಚಾರ ನಡೆಸಿದ್ರು. ಜೊತೆಗೆ ಜಾಲಹಳ್ಳಿಯಲ್ಲಿರುವ ಆರ್.ಅಶೋಕ್ ನಿವಾಸಕ್ಕೆ ತೆರಳಿ ಬೆಂಬಲ ಕೋರಿದ್ರು.

- Call for authors -

LEAVE A REPLY

Please enter your comment!
Please enter your name here