ದೊಡ್ಡಬಿದರಕಲ್ಲು, ಹೆಮ್ಮಿಗೆಪುರ ತ್ಯಾಜ್ಯ ಸಂಸ್ಕರಣಾ ಘಟಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ

0
16

ಬೆಂಗಳೂರು: ದೊಡ್ಡ ಬಿದರಕಲ್ಲು ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಕಸದ ವಾಸನೇ ಬಾರದ ರೀತಿಯಲ್ಲಿ ೨೦೦ ಮೀಟರ್ ಅಂತರದಲ್ಲಿ ಬಫರ್ ಜೋನ್ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ನಗರಾಭಿವೃದ್ಧಿ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ದೊಡ್ಡ ಬಿದರಕಲ್ಲು ಹಾಗೂ ಹೆಮ್ಮಿಗೆಪುರ ತ್ಯಾಜ್ಯಾ ಸಂಸ್ಕರಣ ಘಟಕಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
200 ಮೀಟರ್ ಅಂತರದಲ್ಲಿ ಬಫರ್ ಜೋನ್ ತೆರೆಯುವುದರಿಂದ ಕಸದ ವಾಸನೆ ಈ ವ್ಯಾಪ್ತಿಯಲ್ಲಿ ಮಾತ್ರ ಇರಲಿದ್ದು, ಸುತ್ತಮುತ್ತಲು ಇರುವ ಜನರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು.

ಎರಡೂವರೆ ವರ್ಷದ ಹಿಂದೆ ಈ ಘಟಕ ವೈಜ್ಞಾನಿಕವಾಗಿ ಸ್ಥಾಪಿಸಲಾಗಿದೆ. ದಿನಕ್ಕೆ 130 ಟನ್ ಕಸ ಸಂಸ್ಕರಣೆಯನ್ನು ಇಲ್ಲಿ ಮಾಡಲಾಗುತ್ತದೆ. ಸಂಸ್ಕರಣೆಗೊಳ್ಳುವ ಕಸದಿಂದ ವಿದ್ಯುತ್ ಉತ್ಪಾದನೆಯಂಥ ಕೆಲಸಗಳಿಗೆ ಬಳಸಿಕೊಳ್ಳುವ ನಿಟ್ಟಿನಲ್ಲೂ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ನಗರದಲ್ಲಿ ನಾಲ್ಕೂವರೆ ಸಾವಿರ ಟನ್ ಕಸ ಉತ್ಪಾದನೆಯಾಗುತ್ತಿದ್ದು, ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಈಗಾಗಲೇ ಸೂಚಿಸಲಾಗಿದೆ ಎಂದರು. ಜನಸಾಮಾನ್ಯರು ಕೂಡ ಕಸವನ್ನು ಮನೆಯಲ್ಲೇ ವಿಭಜನೆ ಮಾಡಿದರೆ ವಿಲೇವಾರಿ ಕೂಡ ಸುಲಭವಾಗುತ್ತದೆ. ಒಣ-ಹಸಿ ಕಸ ಬೇರ್ಪಡಿಸದೇ ಇರುವವರಿಗೆ ದಂಡ ಹಾಕುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಹೀಗಾಗಿ ಎಲ್ಲ ಜನರು ಕಸವನ್ನು‌ ಮನೆಯಲ್ಲೇ ಬೇರ್ಪಡಿಸಬೇಕು ಎಂದು ಮನವಿ ಮಾಡಿದರು.

- Call for authors -

LEAVE A REPLY

Please enter your comment!
Please enter your name here