ಹೊನ್ನಾಳಿ: ಸ್ವಕ್ಷೇತ್ರದಲ್ಲಿ ಕೋವಿಡ್ ಲಸಿಕಾ ಅಭಿಯಾನ ಯಶಸ್ವಿಗಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಶ್ರಮಿಸುತ್ತಿದ್ದಾರೆ. ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಜನಜಾಗೃತಿ ಮೂಡಿಸುತ್ತಿದ್ದಾರೆ. ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕೆಂದು ಮನವಿ ಮಾಡ್ತಾ ಇದ್ದಾರೆ.
‘ಎಲ್ಲರಿಗೂ ಲಸಿಕೆ ಎಲ್ಲರಿಗೂ ಉಚಿತ’ ಎನ್ನುವ ಅಭಿಯಾನದೊಂದಿಗೆ ತಮ್ಮ ಮತ ಕ್ಷೇತ್ರದ ಸುಂಕದಕಟ್ಟೆ ಗ್ರಾಮಕ್ಕೆ ಇಂದು ಕೋವಿಶೀಲ್ಡ್ ಲಸಿಕೆ ನೀಡಲಾಗಿದ್ದು, ಗ್ರಾಮಕ್ಕೆ ಭೇಟಿನೀಡಿ ಲಸಿಕೆ ತೆಗೆದುಕೊಂಡವರ ಬಗ್ಗೆ ರೇಣುಕಾಚಾರ್ಯ ಮಾಹಿತಿ ಪಡೆದ್ರು. ಸಾರ್ವಜನಿಕ ಬಂಧುಗಳಿಗೆ ಜಾಗೃತಿ ಮೂಡಿಸಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಲಸಿಕೆ ಹಾಕಿಸಿಕೊಳ್ಳಲು ಮನವಿ ಮಾಡಿದ್ರು.
ನಂತ್ರ ನ್ಯಾಮತಿ ಪಟ್ಟಣದ ಸಾರ್ವಜನಿಕರಿಗೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊರೋನಾ ನಿರೋಧಕ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದ್ದು, ಭೇಟಿ ನೀಡಿ ಲಸಿಕೆ ತೆಗೆದುಕೊಂಡವರ ಬಗ್ಗೆ ಮಾಹಿತಿ ಪಡೆದ್ರು, ಸಾರ್ವಜನಿಕ ಬಂಧುಗಳಿಗೆ ಜಾಗೃತಿ ಮೂಡಿಸಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಲಸಿಕೆ ಹಾಕಿಸಿಕೊಳ್ಳಲು ಮನವಿ ಮಾಡಿದ್ರು.









