ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿರುವ ಜಿ.ಟಿ ದೇವೇಗೌಡರ ಖಾತೆ ಬದಲಾವಣೆ ಖಚಿತವಾಗಿದೆ.ಉನ್ನತ ಶಿಕ್ಷಣ ಖಾತೆ ಬದಲು ಅಬಕಾರಿ ಖಾತೆ ಸಿಗವ ಸಾಧ್ಯತೆ ಇದೆ ಎನ್ನಲಾಗಿದೆ.
ಹೌದು,ಉನ್ನತ ಶಿಕ್ಷಣ ಖಾತೆಯನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿರುವ ಸಚಿವ ಜಿ.ಟಿ.ದೇವೇಗೌಡರ ಖಾತೆ ಬದಲಾವಣೆಯಾಗುವುದು ಬಹುತೇಕ ಖಚಿತವಾಗಿದೆ.ಖಾತೆ ಬದಲಾವಣೆ ಸಂಬಂಧ ಜಿ.ಟಿ ದೇವೇಗೌಡರ ಜೊತೆ ಚರ್ಚೆ ನಡೆಸಿರುವ ಸಿಎಂ ಅಬಕಾರಿ ಹಾಗೂ ಕೃಷಿ ಮಾರುಕಟ್ಟೆ ಖಾತೆ ನೀಡಲು ತೀರ್ಮಾನಿಸಿದ್ದಾರೆ ಎನ್ನುವ ಮಾಹಿತಿ ಜೆಡಿಎಸ್ ಮೂಲಗಳಿಂದ ತಿಳಿದುಬಂದಿದೆ.
ಸಧ್ಯ ಸಿಎಂ ಅವರ ಬಳಿ ಇರುವ ಅಬಕಾರಿ ಹಾಗೂ ಬಂಡೆಪ್ಪ ಕಾಶಂಪೂರ್ ಅವರ ಬಳಿ ಇರುವ ಕೃಷಿ ಮಾರುಕಟ್ಟೆ ಖಾತೆಯನ್ನು ಜಿ.ಟಿ.ದೇವೇಗೌಡರಿಗೆ ನೀಡಿ ಉನ್ನತ ಶಿಕ್ಷಣ ಖಾತೆಯನ್ನು ತಮ್ಮ ಬಳಿಯೆ ಇಟ್ಟುಕೊಳ್ಳಲು ಸಿಎಂ ಚಿಂತನೆ ನಡೆಸಿದ್ದಾರೆ.
ಸಧ್ಯದಲ್ಲೇ ಖಾತೆ ಬದಲಾವಣೆ ಮಾಹಿತಿಯನ್ನು ಸಿಎಂ ರಾಜಭವನಕ್ಕೆ ಕಳುಹಿಸಲಿದ್ದು ಜಿಟಿಡಿಗೆ ಹೊಸ ಖಾತೆಯ ಜವಾಬ್ದಾರಿ ಸಿಗಲಿದೆ.









