Video-ಹಾವೇರಿ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚಲು ಕಾಂಗ್ರೆಸ್ ಕೊಡುಗೆ ದೊಡ್ಡದು: ಸಿದ್ದರಾಮಯ್ಯಗೆ ಸಿಎಂ ತಿರುಗೇಟು…!

0
3

ಹುಬ್ಬಳ್ಳಿ:ಹಾವೇರಿಯ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚಲು ಯಾರು ಕಾರಣ ಎನ್ನುವ ವಿವರವನ್ನು ಉಪ ಚುನಾವಣಾ ಪ್ರಚಾರದಲ್ಲಿಯೇ ಹೇಳುತ್ತೇನೆ ಎಂದು ಉದಾಸಿ, ಸಜ್ಜನರ್ ಸಕ್ಕರೆ ಕಾರ್ಖಾನೆ ನುಂಗಿ ನೀರು ಕುಡಿದರು ಎನ್ನುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿ ವಿಮಾನನಿಲ್ದಾಣದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು,ಇಂದು ಉಪ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದೇನೆ. ಹಾನಗಲ್ ಮತ್ತು ಸಿಂದಗಿಯಲ್ಲಿ ಹೆಚ್ಚಿನ ಸಮಯ ಕೊಟ್ಟು ಪ್ರಚಾರ ನಡೆಸಲಿದ್ದೇನೆ.ಎರಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಅತಿ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸವಿದೆ ಎಂದ್ರು.

ಹಾವೇರಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ತನ್ನದೇ ಆದ ಇತಿಹಾಸವಿದೆ. ಕಾರ್ಖಾನೆ ಮುಚ್ಚುವಲ್ಲಿ ಕಾಂಗ್ರೆಸ್ ಕೊಡುಗೆ ಬಹಳ ದೊಡ್ಡದಿದೆ. ಈಗಾಗಲೇ ಅಲ್ಲಿ ಎಲ್ಲ ಪರಿಶೀಲನೆ ನಡೆಸಿ ಕಬ್ಬು ಕರೆಯುವಂತೆ ವ್ಯವಸ್ಥೆ ಮಾಡಿದ್ದರೆ ಅದು ಹಿಂದೆ ಇದ್ದ ನಮ್ಮ ಸರ್ಕಾರ. ನಮ್ಮ ಸರ್ಕಾರ ಅಲ್ಲಿ ಎಲ್ಲ ಕೆಲಸ ಮಾಡಿದೆ ಆ ವಿವರವನ್ನು ನಾನು ಅಲ್ಲಿಗೆ ಹೋಗಿ ಅಲ್ಲಿಯೇ ಸಿದ್ದರಾಮಯ್ಯ ಆರೋಪಕ್ಕೆ ಉತ್ತರ ಕೊಡಲಿದ್ದೇನೆ ಎಂದ್ರು.

ಹಾನಗಲ್ ಗೆ 2400 ಕೋಟಿ ಅನುದಾನ ಕೊಟ್ಟಿದ್ದೆ, ಹಾನಗಲ್ ಅಳಿಯ ಎಷ್ಟು ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ ಆದರೆ
ಎಲ್ಲಿದೆ 2400 ಕೋಟಿ ಅಷ್ಟು ಹಣವನ್ನು ಯಾವುದಕ್ಕೆ ಕೊಟ್ಟಿದ್ದಾರೆ. ಹಾನಗಲ್ ಗೆ ಸಿದ್ದರಾಮಯ್ಯ ಎಷ್ಟು ಅನುದಾನ ಕೊಟ್ಟಿದ್ದರು ಎನ್ನುವ ವಿವರ ನೀಡಲಿ ನಾವೂ ಏನು ಮಾಡಿದ್ದೇವೆ ಎನ್ನುವ ವಿವರ ನೀಡಲು ಸಿದ್ದರಿದ್ದೇವೆ ಎಂದು ಸವಾಲೆಸೆದ್ರು.

ಉಪ ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಮೇಲಿನ ತೆರಿಗೆ ಕಡಿತದ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಎಲ್ಲವೂ ರಾಜ್ಯದ ಹಣಕಾಸು ಸ್ಥಿತಿಯ ಮೇಲೆ ಅವಲಂಭಿತವಾಗಿದೆ. ಹಣಕಾಸು ಸ್ಥಿತಿ ಉತ್ತಮವಾಗಿದ್ದು, ಆದಾಯ ಹೆಚ್ಚಾದಲ್ಲಿ ತೈಲದ ಮೇಲಿನ ತೆರಿಗೆ ಕಡಿತದ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದ್ರು.

- Call for authors -

LEAVE A REPLY

Please enter your comment!
Please enter your name here