ಬೇಸಿಗೆ ಕಾಲದಲ್ಲಿ ನಮ್ಮ ದೇಹಕ್ಕೆ ಅತ್ಯಧಿಕ ಪ್ರಮಾಣದಲ್ಲಿ ನೀರಿನ ಅಂಶದ ಅವಶ್ಯಕತೆ ಇರುತ್ತದೆ. ನಮಗೆ ತಿಳಿದಿರುವಂತೆ ಕಲ್ಲಂಗಡಿ ಹಣ್ಣು ಅತ್ಯಧಿಕ ಪ್ರಮಾಣದಲ್ಲಿ ನೀರಿನಾಂಶ ನೀಡುವ ಹಣ್ಣಾಗಿದೆ. ಇದು ರುಚಿಯಾದ ಹಣ್ಣು ಕೂಡ ಆಗಿದೆ. ಒಂದು ಕಪ್ ಕಲ್ಲಂಗಡಿ ಹಣ್ಣಿನಲ್ಲಿ ಕೇವಲ 46 ಕ್ಯಾಲರಿ ಇರುತ್ತದೆ. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ವಿಟಾಮಿನ್ ಸಿ, ವಿಟಾಮಿನ್ ಎ ಗಳಿದ್ದು ಆರೋಗ್ಯ ಹಲವು ಲಾಭಗಳನ್ನು ನೀಡುತ್ತದೆ.
ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಡ್ ಮಾಡುವುದು ಅತ್ಯಗತ್ಯ. ಈ ಸಮಯದಲ್ಲಿ ಕಲ್ಲಂಗಡಿ ಕಂಡರೆ ಸ್ವರ್ಗವೇ ಸಿಕ್ಕಂತಾಗುತ್ತದೆ. ಆದರೆ ಯಾವಾಗಲೂ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಉತ್ತಮವಲ್ಲ. ಕಲ್ಲಂಗಡಿ ತಿನ್ನುವುದರಿಂದ ಆಗುವ 4 ಅಡ್ಡ ಪರಿಣಾಮಗಳ ಬಗ್ಗೆ ಇಂದು ತಿಳಿಸುತ್ತೇವೆ.
ರಕ್ತದೊತ್ತಡದ ಮಟ್ಟ ಕಡಿಮೆಯಾಗುತ್ತದೆ (ಲೋ ಬಿಪಿ)
ಹೆಚ್ಚಾಗಿ ಕಲ್ಲಂಗಡಿ ಸೇವಿಸುವುದರಿಂದ ವ್ಯಕ್ತಿಯ ದೇಹದ ಒತ್ತಡದ ಮಟ್ಟ ಕಡಿಮೆಯಾಗಬಹುದು. ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಯೂ ಕಲ್ಲಂಗಡಿಯನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು.
ಕರುಳಿನ ಸಮಸ್ಯೆ:
ಕಲ್ಲಂಗಡಿಯಲ್ಲಿ ಲೈಕೊಪೀನ್ನ ಅಧಿಕವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ಸೇವಿಸಿದರೆ ವಾಂತಿ, ಅಜೀರ್ಣ, ವಾಕರಿಕೆ ಬರುವ ಸಾಧ್ಯತೆಗಳು ಹೆಚ್ಚಿವೆ.
ಮಧುಮೇಹಕ್ಕೆ ಕೆಟ್ಟದು:
ಕಲ್ಲಂಗಡಿಯಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶಗಳಿರುವುದರಿಂದ ದೇಹದ ಸಕ್ಕರೆ ಮಟ್ಟ ಬೇಗನೆ ಹೆಚ್ಚುತ್ತದೆ. ಆದ್ದರಿಂದ ಮಧುಮೇಹ ರೋಗಿಯು ಕಲ್ಲಂಗಡಿ ಸೇವಿಸುವುದು ಒಳ್ಳೆಯದಲ್ಲ.
ಗರ್ಭಾವಸ್ಥೆಯಲ್ಲಿ ಉತ್ತಮವಲ್ಲ:
ಹೆಚ್ಚಾಗಿ ಕಲ್ಲಂಗಡಿಯನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚುತ್ತದೆ, ಇದರಿಂದ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಗರ್ಭಾವಸ್ಥೆಯ ಅವಧಿಯಲ್ಲಿ ಗರ್ಭಿಣಿ ಮಹಿಳೆ ಸಂಪೂರ್ಣವಾಗಿ ಕಲ್ಲಂಗಡಿ ತಿನ್ನುವುದು ನಿಲ್ಲಿಸುವುದು ಒಳ್ಳೆಯದು.









