ಮೊಳಕೆ ಕಾಳು ಅತ್ಯಂತ ಪೋಷಕಾಂಶ ಭರಿತವಾದ ಆಹಾರ ಪ್ರತಿದಿನ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಹಲವು ಬಗೆಯ ಪ್ರಯೋಜನಗಳಿವೆ. ದೈಹಿಕ ನಿಶ್ಯಕ್ತಿ ಮತ್ತು ಅಪೌಷ್ಠಿಕತೆಯನ್ನು ತೆಗೆದುಹಾಕಲು ಮೊಳಕೆಕಾಳು ಉತ್ತಮ ಆಹಾರವಾಗಿದೆ.
ಮೊಳಕೆ ಕಾಳಿನಲ್ಲಿ ದೈಹಿಕ ನಿಶ್ಯಕ್ತಿ ಮತ್ತು ಅಪೌಷ್ಟಿಕತೆ ಹೊಗಲಾಡಿಸುವ ಗುಣಗಳು ಮಾತ್ರ ಇಲ್ಲ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ. ಖಾಲಿ ಹೊಟ್ಟೆಯಲ್ಲಿ ಮೊಳಕೆಕಾಳು ಸೇವಿಸಿದರೆ ಇರುವ ಪ್ರಯೋಜನಗಳ ಕುರಿತು ತಿಳಿಯ ಬೇಕೇ ಹಾಗಾದ್ರೆ ಈ ಸುದ್ದಿಯನ್ನು ಪೂರ್ತಿಯಾಗಿ ಓದಿ…..
* ಬಾದಾಮಿಗಳಲ್ಲಿ ಕಂಡುಬರುವ ಪೋಷಕಾಂಶಗಳ ಪ್ರಮಾಣವು, ಮೊಳಕೆ ಕಾಳುಗಳಲ್ಲಿ ಸಮೃದ್ಧವಾಗಿದೆ, ಅದು ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.
* ಕಡಲೇ ಕಾಳಿನಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ಜೀರ್ಣ ಶಕ್ತಿಯನ್ನು ಬಲಪಡಿಸುತ್ತದೆ. ಇದರಿಂದಾಗಿ ಹಸಿವು ಹೆಚ್ಚಾಗುತ್ತದೆ.
* ಕ್ಯಾಲ್ಸಿಯಂ ಮತ್ತು ಕಬ್ಬಿಣ ಅಂಶಗಳು ಹೆಚ್ಚಿರುವುದರಿಂದ ಸ್ನಾಯುಗಳು ಮತ್ತು ಎಲುಬುಗಳನ್ನು ಬಲಪಡಿಸುತ್ತದೆ.
* ಮೊಳಕೆಕಾಳು ಸೇವನೆಯಿಂದ ಪ್ರತಿದಿನ ವ್ಯಾಯಾಮ ಮಾಡದಿದ್ದರೂ ಸಹ ಎದೆ ನೋವು ಕಡಿಮೆಯಾಗುತ್ತದೆ.









