ಬೆಂಗಳೂರು: ನಗರದಲ್ಲಿ ಸರಗಳ್ಳರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.ಬಂಧನದ ವೇಳೆ ಸರಗಳ್ಳರು ನಡೆಸಿದ ದಾಳಿಗೆ ಪ್ರತಿಯಾಗಿ ಪೊಲೀಸರು ಆತ್ಮರಕ್ಷಣೆಗಾಗಿ ಫೈರಿಂಗ್ ನಡೆಸಿದ್ದಾರೆ.
ಕೋಡಿಪಾಳ್ಯ ನೈಸ್‌ರೋಡ್ ಮಾರ್ಗ ಮಧ್ಯೆ ಬೆಳಿಗ್ಗೆ 5.45ರ ಸುಮಾರಿಗೆ ಪೊಲೀಸರಿಂದ ಗುಂಡಿನ ದಾಳಿ ನಡೆದಿದ್ದು ಸರಗಳ್ಳ ಅಚ್ಯುತ್‌ಕುಮಾರ್ ಗಣಿ ಕಾಲಿಗೆ ಬಿದ್ದ ಗುಂಡೇಟು ಬಿದ್ದಿದೆ.
ಆತನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನ್ನಪೂರ್ಣೇಶ್ವರಿನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್ ಪ್ರವೀಣ್ ಯಲಿಗಾರ್‌ರಿಂದ ಫೈರಿಂಗ್ ನಡೆಸಿದ್ದು 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗರುವ ಅಚ್ಯುತ್‌ಕುಮಾರ್ ಗಣಿ
ಆರೋಪಿಗಾಗಿ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಶೋಧ ನಡೆಸಿದ್ದರು ನೈಸ್ ರೋಡ್ ಬಳಿ ಪತ್ತೆಯಾದ ವೇಳೆ ಬಂಧನಕ್ಕೆ ಮುಂದಾಗಿದ್ದರು ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಈ ಸಂದರ್ಭದಲ್ಲಿ ಆರೋಪಿ ಅಚ್ಯುತ್‌ಕುಮಾರ್ ಗಣಿ ಮೇಲೆ ಫೈರಿಂಗ್ ನಡೆಸಲಾಗಿದೆ. ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ರವಿ .ಡಿ.ಚನ್ನಣನವರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.









