ಬೆಂಗಳೂರು: ನ್ಯಾಯಾಲಯದಿಂದ ನನಗೆ ಯಾವುದೇ ನೋಟೀಸ್ ಬಂದಿಲ್ಲ, ದೆಹಲಿಯಲ್ಲಿ ಪಿ.ಎ. ಆಂಜನೇಯ ಮನೆಯಲ್ಲಿ ಸಿಕ್ಕ ಹಣಕ್ಕೂ ನನಗೂ ಯಾವ ಸಂಬಂಧವೂ ಇಲ್ಲ. ನೀವೇ ಮಾದ್ಯಮಗಳಲ್ಲಿ ಜನರಿಗೆ ಬೇಕಾದ ರಂಜನೆ ಕೊಡ್ತಾ ಇದ್ದೀರ ಕೊಡಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದರು.
ಬೆಂಗಳೂರಿನ ಸದಾಶಿವ ನಗರದ ಬಳಿ ಸುದ್ಧಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನಿಜಕ್ಕೂ ನನಗೆ ಶಾಕ್ ಆಗಿದೆ. ನಾನು ಇದ್ಯಾವುದರ ಬಗ್ಗೆಯೂ ಮಾತನಾಡೊಲ್ಲ. ದೆಹಲಿಯಲ್ಲಿ ಎರಡು ಬೆಡ್ ರೂಂ ಫ್ಲಾಟ್ ಇದೆ, ಶೀಘ್ರದಲ್ಲೇ ಇನ್ನೊಂದು ಮನೆ ಉದ್ಘಾಟನೆ ಇದೆ. ಅದು ನಾನು ಆಗಾಗ ದೆಹಲಿಗೆ ಹೋದಾಗ ರೆಸ್ಟ್ ಮಾಡೋಕೆ ಇಟ್ಕೊಂಡಿರೋದು. ಅಲ್ಲಿ ಯಾವುದೇ ಹವಾಲಾ ದಂಧೆ ನಡೆಸ್ತಿಲ್ಲ. ನ್ಯಾಯಾಲಯದ ಮೇಲೆ ವಿಶ್ವಾಸವಿದೆ ತೀಕ್ಷವಾಗಿ ಪ್ರತಿಕ್ರಿಯೆ ನೀಡಿದರು.
ಬಿಜೆಪಿ ನಾಯಕರ ಬಗ್ಗೆ ಮಾತಾಡೋಕೆ ಸಾಕಷ್ಟು ವಿಷಯ ಇದೆ. ಶೋಭಾ ಕರಂದ್ಲಾಜೆ ಹೇಳಿಕೆಯ ಬಗ್ಗೆಯೂ ಪ್ರತಿಕ್ರಿಯೆ ನೀಡೊಲ್ಲ, ಅವರಿಗೆ ಆಲ್ ದಿ ಬೆಸ್ಟ್ ಹೇಳ್ತೀನಿ. ಬಿಜೆಪಿಯಲ್ಲಿ ಸಾಕಷ್ಟು ಉದ್ಯಮಿಗಳು, ಹೋಟೆಲ್ ಮಾಲಿಕರಿದ್ದಾರೆ. ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಇದ್ದಾರೆ. ಆದ್ರೆ ಎಲ್ಲದಕ್ಕೂ ಕಾಲ, ಶುಭಕಾಲ, ಶುಭ ಮಹೂರ್ತ ಬರಬೇಕು. ಈಗ ನಾನು ಇದ್ಯಾವುದರ ಬಗ್ಗೆಯೂ ಮಾತನಾಡೊಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.









