ಹಜ್ ಭವನಕ್ಕೆ ಕಲಾಂ ಹೆಸರಿಡಿ: ಬಿಎಸ್ವೈ ಸಲಹೆ

0
137

ಬೆಂಗಳೂರು: ಹಜ್ ಭವನಕ್ಕೆ ಬೇರೆ ಹೆಸರು ಇಡಲೇಬೇಕು ಎಂದಾದರೆ ವಿವಾದಿತ ಟಿಪ್ಪು ಹೆಸರೇ ಯಾಕೆ ಬೇಕು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅಥವಾ ಶಿಶುನಾಳ ಷರೀಫ್ ಅವರ ಹೆಸರಿಡಿ ಎಂದು‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆ‌ ಶುದ್ಧ ನಡೆ ಸೂಕ್ತ ವಿಕಾಸ್ ಕೃತಿಯ ಕನ್ನಡ ಅವತರಣಿಕೆ ಯಡಿಯೂರಪ್ಪ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಘರ್ ಹೆಸರು ಪ್ರಸ್ತಾಪ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು.ಜಮೀರ್ ಮೂಲಕ ವಿವಾದ ಸೃಷ್ಠಿಸಿದ್ದಾರೆ.ಹಜ್ ಭವನಕ್ಕೆ ಟಿಪ್ಪು ಹೆಸರಿಡುವುದು ಬೇಡ ಟಿಪ್ಪು ಸುಲ್ತಾನ್ ಹೆಸರು ಬದಲು ಪಕ್ಷಾತೀತ ಹಾಗು ಜಾತ್ಯಾತೀತ,ಧರ್ಮಾತೀತವಾಗಿ ಒಪ್ಪಿಕೊಳ್ಳುವ ಅಬ್ದುಲ್ ಕಲಾಂ ಹೆಸರಿಡಬಹುದು, ಶಿಶುನಾಳ ಷರೀಫ್ ಹೆಸರಿಡಬಹುದು,ಅದನ್ನು ಬಿಟ್ಟು ಈಗಾಗಲೇ ಟಿಪ್ಪು ಜಯಂತಿಯಿಂದ ಸೃಷ್ಠಿಯಾಗಿರುವ ವಿವಾದದ ನಡುವೆ ಅನಗತ್ಯವಾಗಿ ಸಚಿವರು ಹೊಸ ವಿವಾದ ಮೈಮೇಲೆಳೆದುಕೊಂಡಿದ್ದಾರೆ ಎಂದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ರಚನೆ ವಿಚಾರ ಸಂಬಂಧ ಹಿಂದಿನ ಸರ್ಕಾರವೂ ಕ್ರಮ ಕೈಗೊಳ್ಳಲಿಲ್ಲ ಈಗಿನ ಸರ್ಕಾರವೂ ಎಚ್ಚರಗೊಳ್ಳಲಿಲ್ಲ,ಆದರೂ ನಾವು ಕಾವೇರಿ ವಿಚಾರದಲ್ಲಿ ನಾವು ರಾಜ್ಯ ಸರ್ಕಾರದ ಪರ ಇದ್ದೇವೆ
ರೈತರಿಗೆ ಅನ್ಯಾಯ ಆಗದಂತೆ ಸರ್ಕಾರ ಹೆಜ್ಜೆ ಇಡಲು‌ ರಾಜ್ಯದ ಪ್ರತಿನಿಧಿ ನೇಮಕ ಯಾಕೆ ಮಾಡ್ತಿಲ್ಲ ಎಂದು ನಮಗೆ ಅರ್ಥವಾಗ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಅಕೌಂಟ್ ಗೆ 15 ಲಕ್ಷ ಹಾಕುತ್ತೇವೆ ಎನ್ನುವ ಮೋದಿ ಹೇಳಿಕೆ ವಿಚಾರವನ್ನು ಮಾಧ್ಯಮ ಪ್ರತಿನಿಧಿಗಳ ಪ್ರಶ್ನಿಸುದ್ದಿಂತೆ ಗರಂ ಆದ ಬಿಎಸ್ವೈ ನೀವು ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ರೀತಿ ಮಾತನಾಡಬೇಡಿ ಪ್ರಧಾನಿ ಪ್ರತಿಯೊಬ್ಬರ ಅಕೌಂಟ್ ಗೆ ದುಡ್ಡು ಹಾಕುತ್ತೇನೆ ಎಂದು ಎಲ್ಲೂ ಹೇಳಿಲ್ಲ ಸುಮ್ನೆ ಆ ಪ್ರಶ್ನೆ ಬೇಡ ಎಂದರು.

ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ನಾನು ಮನವಿ ಮಾಡುತ್ತೇನೆ ನಾನು ಯಾವುದನ್ನು ಕಲ್ಪನೆ ಮಾಡಿಕೊಳ್ಳೋದಕ್ಕೆ ಹೋಗಲ್ಲ ನಿಮ್ ಹತ್ರ ಏನು ಡೈರಿಗಳು ಇವೆಯೋ. ಅವುಗಳನ್ನು ಬಿಡುಗಡೆ ಮಾಡಲಿ ನಿಮ್ ಹತ್ರ ಸಿಐಡಿ, ಎಸಿಬಿ ಇದೆ, ತನಿಖೆ ಮಾಡಿಸಿ ಸ್ವಾಮಿ ಎಂದರು.

ಇದೇ ಜೂನ್ 29ಕ್ಕೆ ರಾಜ್ಯ ಕಾರ್ಯಕಾರಣಿ ಸಭೆ ಇದೆ
ಅಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಆಗಲಿದೆ. ವಿಧಾನಪರಿಷತ್ ವಿಪಕ್ಷ ನಾಯಕನ ಸ್ಥಾನದ ಬಗ್ಗೆ ಚರ್ಚೆ ಮಾಡ್ತೇವೆ.ವಿಪಕ್ಷ ಸ್ಥಾನದ ನಾಯಕ ನೇಮಕ ಶೀಘ್ರದಲ್ಲೇ ನಿರ್ಧಾರಿಸುತ್ತೇವೆ.ಬಿಜೆ ಪುಟ್ಟಸ್ವಾಮಿ ಅಸಮಾಧಾನ, ಬೇಸರಿದಿಂದ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ ಅವರನ್ನು ಕರೆದು ಮಾತನಾಡುತ್ತೇನೆ.ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

- Call for authors -

LEAVE A REPLY

Please enter your comment!
Please enter your name here