ಭರ್ತಿಯಾಗುವತ್ತಾ ಆಲಮಟ್ಟಿ ಜಲಾಶಯ:ವಿದ್ಯುತ್ ಉತ್ಪಾದನೆಗೆ ನೀರು ಬಿಡುಗಡೆ

0
28

ವಿಜಯಪುರ:ಆಲಮಟ್ಟಿ ಜಲಾಶಯ ಭರ್ತಿಯಾಗುತ್ತಿದ್ದು ವಿದ್ಯುತ್ ಉತ್ಪಾದನೆಗಾಗಿ ಆಲಮಟ್ಟಿಯಲ್ಲಿನ ಜಲವಿದ್ಯುತ್ ಘಟಕಕ್ಕೆ 37500 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ.

ಜಿಲ್ಲೆಯ ಆಲಮಟ್ಟಿ ಕೃಷ್ಣಾ ಜಲಾಶಯಕ್ಕೆ 1.42 ಲಕ್ಷ ಕ್ಯೂಸೆಕ್ಸ್ ನೀರಿನ ಒಳಹರಿವಿದ್ದು,123.081 ಟಿಎಂಸಿ ಗರಿಷ್ಠ ಜಲ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿಂದು 108 ಟಿಎಂಸಿ
ನೀರು ಸಂಗ್ರಹವಾಗಿದೆ.519 .60 ಮೀಟರ್, ಗರಿಷ್ಠ ಎತ್ತರವಿರುವ ಡ್ಯಾಮ್ ನಲ್ಲಿ ಇಂದು 518 .67
ಮೀಟರ್ ನೀರು ಸಂಗ್ರಹವಾಗಿದೆ. ಮಹಾರಾಷ್ಟ್ರದ ,
ಧಾಮ್, ಕನೇರ್, ಅಗ್ನಿ ನದಿ, ಕೊಯ್ನಾ, ಪಂಚ ಗಂಗಾ, ವೇದ ಗಂಗಾ, ದೂಧ ಗಂಗಾ, ಹಿರಣ್ಯ ಕೇಶಿ, ತುಳಸಿ, ರಾಧಾನಗರಿ, ಪಾಟ್ ಗಾಂವ್,ಅಲ್ಲದೆ, ಕರ್ನಾಟಕದ ರಾಜಾಪುರ ಬ್ಯಾರೇಜ್,
ಘಟ ಪ್ರಭಾ, ಹಿಪ್ಪರಗಿ ಬ್ಯಾರೇಜ್ ಗಳಿಂದ,ಅಲ್ಲದೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಅಧಿಕ ಗೊಂಡಿದೆ.

ಜಲಾಶಯದ 26 ಕ್ರಸ್ಟ್ ಗೇಟ್ ಗಳಲ್ಲಿ ಕೆಲವು ಗೇಟ್ ಗಳನ್ನು ತೆರೆದು 10151 ಕ್ಯೂಸೆಕ್ಸ್ ನೀರನ್ನು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಜಲಾಶಯಕ್ಕೆ ಬಿಡಲಾಗುತ್ತಿದೆ. ವಿದ್ಯುತ್ ಉತ್ಪಾದನೆಗಾಗಿ ಕೆಪಿಸಿಎಲ್ ಗೆ 37500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದ್ದು, ಒಟ್ಟು 290 ಮೆಗಾವ್ಯಾಟ್ ಸಾಮರ್ಥ್ಯದ ಆಲಮಟ್ಟಿ ಕೆಪಿಸಿಎಲ್ ಘಟಕದಲ್ಲಿ ಸದ್ಯ 175 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭಗೊಂಡಿದೆ.

ಕೂಡಗಿಯ ಎನ್‌ಟಿಪಿಸಿ ಆಲಮಟ್ಟಿ ಎಡದಂಡೆ ಮತ್ತು ಬಲದಂಡ ಕಾಲುವೆಗಳಿಗೆ ಯಾವುದೇ ತರದ ನೀರನ್ನು ಡ್ಯಾಮ್ ನಿಂದ ಬಿಡಲಾಗುತ್ತಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ.

- Call for authors -

LEAVE A REPLY

Please enter your comment!
Please enter your name here