ಕಲಬುರಗಿ:ನಗರದ ರಾಜಾಪುರ ಬಡಾವಣೆಯ ಅಂಬೇಡ್ಕರ್ ವಸತಿ ನಿಲಯದ ವಾರ್ಡನ್ ಸಂಜುಕುಮಾರ್ ಅಮಾನತ್ತುಗೊಳಿಸಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಆದೇಶಿಸಿದ್ದಾರೆ.
ಕಲಬುರಗಿಯ ರಾಜಾಪುರ ಬಡಾವಣೆಯ ವಸತಿ ನಿಲಯಕ್ಕೆ ಸಚಿವ ಪ್ರೀಯಾಂಕ್ ಖರ್ಗೆ ದಿಢೀರ್ ಭೇಟಿ ನೀಡಿದರು. ಆಹಾರ ಶುಚಿತ್ವ,ರುಚಿ ಸೇರಿದಂತೆ ಸೌಲಭ್ಯಗಳ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು.
ನಂತರ ಹಾಸ್ಟೆಲ್‌ನಲ್ಲಿನ ಅವ್ಯವಸ್ಥೆ ಕಂಡು ಸಚಿವರು ಗರಂ ಆದರು ಸ್ಥಳದಲ್ಲಿಯೇ ಹಾಸ್ಟೆಲ್ ವಾರ್ಡನ್ ಸಂಜುಕುಮಾರ್ ಅಮಾನತ್ತುಗೊಳಿಸುವಂತೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗೆ ಆದೇಶ ನೀಡಿದರು.
ಕೂಡಲೇ ಹಾಸ್ಟೆಲ್‌ನಲ್ಲಿರುವ ಬೆಡ್‌ಶಿಟ್ ಹಾಗೂ ಮಂಚಗಳ ಬದಲಾವಣೆಗೆ ಸೂಚನೆ ನೀಡಿ ವಸತಿ ನಿಲಯಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳ ಕಲ್ಪಿಸಲು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ಆದೇಶಿಸಿದರು.









