ಬೆಂಗಳೂರು,ಮೇ-26:ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿದ್ದ ಆಯುಷ್ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ವರ್ಗದ ಕುಂದು ಕೊರತೆ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರು ಕರೆದಿದ್ದ ಸಭೆ ಯಶಸ್ವಿ ಆಗಿದೆ.
ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಆಯುಷ್ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ವರ್ಗದ ಕುಂದು ಕೊರತೆ ಹಾಗೂ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಕೊನೆಗೆ
ವೈದರು ಮತ್ತು ಸಿಬ್ಬಂದಿಗಳ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿ ಪ್ರತಿಭಟನೆ ಹಿಂದಕ್ಕೆ ಪಡೆಯಲು ಸಚಿವ ಶ್ರೀ ರಾಮುಲು ವಿನಂತಿಸಿದರು.
ಸಚಿವರು ನೀಡಿದ ಭರವಸೆಗಳು:
ಅಲೋಪತಿ ಗುತ್ತಿಗೆ ವೈದರಿಗೆ ಯಾವ ಆಧಾರದ ಮೇಲೆ ವೇತನ ಹೆಚ್ಚಿಸಲಾಗಿದೆಯೋ ಅದೇ ಮಾನದಂಡ ದ ಆಧಾರದ ಮೇಲೆ ಆಯುಷ್ ವೈದ್ಯರಿಗೆ ಸಹ ವೇತನ ಹೆಚ್ಚಿಸಲು ನಿರ್ಧರಿಸಲಾಗಿದೆ.
NHM , RBSK ವೈದ್ಯರಿಗೆ ರಾಜ್ಯ ಸರ್ಕಾರ top up ವೇತನ ಕೊಡಲು ಆರ್ಥಿಕ ಇಲಾಖೆಗೆ ತಕ್ಷಣ ಕಡತ ಸಲ್ಲಿಸಲು ಸೂಚಿಸಲಾಗಿದೆ.
NHM , RBSK ವೈದ್ಯರಿಗೆ ವೇತನ ಹೆಚ್ಚಿಸಲು ಇದೇ ವರ್ಷದ PIP ಯಲ್ಲಿ ಅನುಷ್ಠಾನ ಗಳಿಸಲು ಕೇಂದ್ರದ ಅನುಮತಿ ಪಡೆಯಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆಯುಷ್ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ scholarship
ಹೆಚ್ಚಿಸಲು ಆರ್ಥಿಕ ಇಲಾಖೆಗೆ ಕಡತ ಕಳಿಸಲು ತೀರ್ಮಾನಿಸಲಾಗಿದೆ.
Special Recruitment cell ಮುಖಾಂತರ 2000 MBBS ವೈದ್ಯರನ್ನು ನೇಮಕಾತಿ ಮಾಡಿಕೊಳ್ಳುವ ಮಾದರಿಯಲ್ಲಿ ಆಯುಷ್ ವೈದ್ಯರನ್ನು ಸಹ ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.









