ಬೆಂಗಳೂರು: ಕೊರೊನಾ ಸಂಬಂಧಪಟ್ಟಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ ಬೆಂಗಳೂರಲ್ಲಿ ವಲಯಗಳನ್ನಾಗಿ ಮಾಡಿ ಸಚಿವರನ್ನ ಸಿಎಂ ನೇಮಕ ಮಾಡಲಿದ್ದಾರೆ.ಬಳಿಕ ಆ ಟೀಂ ಆಯಾ ವಲಯಗಳಿಗೆ ಭೇಟಿ ಕೊಡಲಿದ್ದು ಆ ಟೀಂ ವರದಿ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಹೇಳಿದ್ದಾರೆ.
ಸಚಿವ ಸಂಪುಟ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವರು,ಬೆಂಗಳೂರು ನಗರದ ಕೆಲ ಜೋನ್‌ಗಳಿಗೆ ಸಚಿವರಿಗೆ ಉಸ್ತುವಾರಿ ಜೋನ್‌ಗಳಿಗೆ ಮಂತ್ರಿಗಳ ನೇಮಕ ಮಾಡಲಾಗಿದೆ ಅದರ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಮಾಹಿತಿ ನೀಡುತ್ತಾರೆ ಜಿಲ್ಲಾ ವಾರು ನಿಗಾವಹಿಸಲು ಸೂಚಿಸಿದ್ದಾರೆ, ವೀಕೆಂಡ್ ಲಾಕ್‌ಡೌನ್ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ, ತಂಡ ರಚನೆ ಮಾಡಿದ್ದಾರೆ, ಜವಬ್ದಾರಿ ನೀಡಲಾಗಿದೆ ಎಂದರು.
ಗುತ್ತಿಗೆ ವೈದ್ಯರ ನೇಮಕಾತಿ ಕುರಿತು ಚರ್ಚಿಸಲಾಗಿದೆ
6 ತಿಂಗಳಿಗೆ 2.5 ಅಂಕಗಳನ್ನು ನೀಡಿ ಅವರನ್ನ ಸೇವೆಯಲ್ಲಿ ಮುಂದುವರೆಸುವ ಬಗ್ಗೆ ಚರ್ಚೆ ಆಗಿದೆ ಜತೆಗೆ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಸಲು ನಿರ್ಧರಿಸಲಾಗಿದೆ ಈಗಿರುವ 21 ವರ್ಷ ಮಿತಿಯನ್ನು 26 ವರ್ಷಕ್ಕೆ ಏರಿಸಲಾಗಿದೆ ಎಂದರು.
ತಕ್ಷಣಕ್ಕೆ ಬಳಸಿಕೊಳ್ಳಬಹುದಾದ ಹಣ 80 ಕೋಟಿ ಇತ್ತು
ಆದ್ರೀಗ ಕೋವಿಡ್ 19 ನಿಂದ ಸಮಸ್ಯೆಗೊಳಗಾದವರಿಗೆ ಪರಿಹಾರ ಕೊಡಬೇಕು ಹಾಗಾಗಿ ಸಾದಿಲ್ವಾರು ನಿಧಿಯನ್ನ 500 ಕೋಟಿಗೆ ಹೆಚ್ಚಳ ಮಾಡಿಕೊಂಡಿದ್ದೇವೆ ಇದಕ್ಕಾಗಿ ಸುಗ್ರೀವಾಜ್ಞೆಯನ್ನು ತಂದಿದ್ದೇವೆ, ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ 95 ಕೋಟಿ ಹಣ ಬಿಡುಗಡೆಗೆ ನಿರ್ಧರಿಸಲಾಯಿತು,
ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಪ್ರಾಥಮಿಕ ವಿಚಾರಣೆಯನ್ನ 90 ದಿನದಲ್ಲಿ ಮುಗಿಸಬೇಕು ೬ ತಿಂಗಳ ಒಳಗೆ ಚಾರ್ಜ್ ಶೀಟ್ ಸಲ್ಲಿಸಬೇಕು ಎರಡನ್ನು ಕಡ್ಡಾಯಗೊಳಿಸಿ ಕಾಯ್ದೆ ತಿದ್ದುಪಡಿ ಮಾಡಲಾಯಿತು.









