ತಮಿಳುನಾಡಿನಲ್ಲಿ ಕೊಲೆಯಾದ ಬೆಂಗಳೂರು ರೌಡಿ!

0
242

ಬೆಂಗಳೂರು: ನಗರದ ರೌಡಿಯೊಬ್ಬನನ್ನು ತಮಿಳುನಾಡಿನಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕರ್ನಾಟಕ ಗಡಿಗೆ ಹೊಂದಿಕೊಂಡಿರೋ ತಮಿಳುನಾಡಿನ ಡೆಂಕನಿ ಕೋಟೆಯಲ್ಲಿ ನಡೆದಿದೆ. ಬೆಂಗಳೂರು ಹೊರವಲಯ ಬೊಮ್ಮನಹಳ್ಳಿಯ ಇಸ್ಮಾಯಿಲ್(30) ಕೊಲೆಯಾದ ರೌಡಿಯಾಗಿದ್ದು ಈತನ ವಿರುದ್ಧ ಬೊಮ್ಮನಹಳ್ಳಿ ಬಂಡೆಪಾಳ್ಯ ಹಾಗೂ ಮಡಿವಾಳ ಪೋಲಿಸ್ ಠಾಣೆಗಳಲ್ಲಿ 3 ಕೊಲೆ ಪ್ರಕರಣ ದಾಖಲಾಗಿವೆ.

ಇಸ್ಮಾಯಿಲ್ ಇಂದು ಆನೇಕಲ್ ಗಡಿಗೆ ಹೊಂದಿಕೊಂಡಿರೋ ತಮಿಳುನಾಡಿನ ಡೆಂಕಣಿ ಕೋಟೆಯ ತನ್ನ ಸ್ನೇಹಿತ ಬಶೀರ್ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಇಸ್ಮಾಯಿಲ್ ನನ್ನು ಹಿಂಬಾಲಿಸಿದ 7 ಜನ ದುಷ್ಕರ್ಮಿಗಳ ತಂಡ ಬಶೀರ್ ಮನೆಯಲ್ಲೇ ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ .

ಆರೋಪಿಗಳು ಇನ್ನೋವಾ ಕಾರಿನಲ್ಲಿ ಆಗಮಿಸಿದ್ದು ಮಂಕಿ ಕ್ಯಾಪ್ ಧರಿಸಿ ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳ ಏಟಿಗೆ ಇಸ್ಮಾಯಿಲ್’ನ ಎಡಕೈ ತುಂಡಾಗಿದ್ದು ಜೊತೆಗೆ ಆತನ ತಲೆ ಛಿದ್ರವಾಗಿದೆ, ಇಸ್ಮಾಯಿಲ್ ನ ಕೊಲೆಗೆ ಹಲವುದಿನಗಳಿಂದ ಸಂಚು ರೂಪಿಸಿದ್ದ ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಿ ಕೊನೆಗೆ ಇಂದು ಕೊಲೆ ಮಾಡಿದ್ದಾರೆ. ಘಟನೆಯ ಸ್ಥಳದಲ್ಲೇ ಲಾಂಗ್’ ಡ್ರಾಗನ್ ದೊರೆತಿದ್ದು ಸ್ಥಳಕ್ಕೆ ಡೆಂಕನಿ ಕೋಟೆ ಪೊಲೀಸರು ಆಗಮಿಸಿ ಸ್ಥಳ ಮಹಜರ್ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇಸ್ಮಾಯಿಲ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

- Call for authors -

LEAVE A REPLY

Please enter your comment!
Please enter your name here