ಶಿವಮೊಗ್ಗ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಪರ ಹೇಳಿಕೆ ಸರಿಯಲ್ಲ.ರಾಜ್ಯ ವಿಭಜನೆ ಮಾತನ್ನು ಯಾವುದೇ ಕಾರಣಕ್ಕೂ ಬಿಜೆಪಿ ಬೆಂಬಲಿಸಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ತವರ ಜಿಲ್ಲೆಗೆ ಭೇಟಿ ನೀಡಿದ ವೇಳೆ ಬಿಜೆಪಿ ಕಚೇರಿಯಲ್ಲಿ ಮಾತಾಡಿದ ಬಿಎಸ್ವೈ, ಯಾರೂ ಕೂಡ ರಾಜ್ಯ ವಿಭಜನಯೆ ಮಾತನಾಡಬಾರದು, ರಾಜ್ಯ ವಿಭಜನೆಯ ಕೂಗಿಗೆ ನಮ್ಮ ಬೆಂಬಲವಿಲ್ಲ.ಏಕೀಕೃತ ಕರ್ನಾಟಕದ ಪರವೇ ಬಿಜೆಪಿ ಇರಲಿದೆ ಎಂದ್ರು.
ಉತ್ತರ ಕರ್ನಾಟಕ ಅಭಿವೃದ್ಧಿ ಆಗಿಲ್ಲ ಅಂತಾ ಪ್ರತ್ಯೇಕ ರಾಜ್ಯಾದ ಬೇಡಿಕೆ ಇಡುವುದು ಸಲ್ಲದು,ಅಭಿವೃದ್ಧಿಗಾಗಿ ಹೋರಾಟ ಮಾಡಬೇಕೇ ಹೊರತು ರಾಜ್ಯ ವಿಭಜನೆಯ ಮಾತನಾಡುವುದು ಸರಿಯಲ್ಲ ಎಂದ್ರು.
ಲೋಕಸಭಾ ಚುನಾವಣೆ ಎದುರಿಸಲು ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ.ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ 28 ರಂದು ಬೆಂಗಳೂರಿಗೆ ಬರುತ್ತಿದ್ದು, ಪಕ್ಷ ಸಂಘಟನೆ,ಚುನಾವಣಾ ಕಾರ್ಯತಂತ್ರದ ಕುರಿತು ಚರ್ಚಿಸಲಾಗುತ್ತೆ ಅಂದ್ರು ಯಡಿಯೂರಪ್ಪ.
ಜುಲೈ27 ರಂದು ಗ್ರಹಣವಿದೆ.ಈ ಗ್ರಹಣ ಬಹಳ ಕೆಟ್ಟ ಗ್ರಹಣ ಎಂದು ಹೇಳಲಾಗುತ್ತಿದೆ.ದೇವರನ್ನು ಪ್ರಾರ್ಥಿಸುವುದು ಬಿಟ್ಟು ಬೇರೆ ದಾರಿ ಇಲ್ಲ.ಗ್ರಹಣದ ವೇಳೆಯಲ್ಲಿ ಯಾವುದೇ ಶುಭ ಕಾರ್ಯ ಆರಂಭಿಸಬೇಡಿ ಎಂದು ಪಕ್ಷದ ಮುಖಂಡರಿಗೆ ಸಲಹೆ ನೀಡಿದ ಯಡಿಯೂರಪ್ಪ,ಜನರೂ ಕೂಡ ಗ್ರಹಣ ಕಾಲದಲ್ಲಿ ಸ್ವಲ್ಪ ಎಚ್ಚರ ವಹಿಸಬೇಕು ಯಾವುದೇ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದ್ರು. ತಾವೂ ಕೂಡ ಗ್ರಹಣದ ಬಳಿಕವೇ ರಾಜ್ಯ ಪ್ರವಾಸ ಆರಂಭಿಸುವುದಾಗಿ ಹೇಳಿದ್ರು.
ದುಬಾರಿ ಐಫೋನ್ ಉಡುಗೊರೆಯನ್ನು ಬಿಜೆಪಿ ತಿರಸ್ಕರಿಸಿದೆ.ನಮ್ಮ ಯಾವ ಸಂಸದರೂ ಗಿಫ್ಟ್ ಸ್ವೀಕರಿಸಲ್ಲ,ಕಿಟ್ ಪಡೆದವರು ಕೂಡ ಹಿಂದಿರುಗಿಸಿದ್ದಾರೆ ಎಂದ್ರು.









