ಬೆಂಗಳೂರು: ಬಿಜೆಪಿ ಪಾದಯಾತ್ರೆಯನ್ನು ನಾನು ಸ್ವಾಗತಿಸುತ್ತೇನೆ ಹೋರಾಟ, ಪ್ರತಿಭಟನೆ ಮಾಡೋದಕ್ಕೆ ಪ್ರತಿಯೊಬ್ಬರಿಗೂ ಹಕ್ಕಿದೆ ಈಗಲಾದರೂ ರೈತರ ಪರವಾಗಿ ಹೋರಾಟ ಮಾಡ್ತಿದ್ದಾರಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ರು.
ಜಯನಗರದ ಆರ್. ವಿ. ಟೀಚರ್ಸ್ ಕಾಲೇಜಿನಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿಎಂ ಮಾತನಾಡಿದ್ರು. ರೈತರ ಸಾಲ ಮನ್ನಾ ವಿಚಾರ ಪದೇ ಪದೇ ಚರ್ಚೆ ಮಾಡೋದು ಬೇಡ ಇವತ್ತು ಬಂದಿರೋದು ಕಾರ್ಗಿಲ್ ವೀರ ಯೋಧರಿಗೆ ಗೌರವ ಸಲ್ಲಿಸೋದಕ್ಕೆ.ಆದರೂ ಟೀಕೆಗೆ ಉತ್ತರ ನೀಡಬೇಕಲ್ವಾ? ದೇಶದಲ್ಲೇ ಮೊದಲ ಬಾರಿಗೆ ದೊಡ್ಡ ಮೊತ್ತದ ರೈತರ ಸಾಲ ಮನ್ನಾ ಮಾಡಿದ್ದೇನೆ. ನನಗೆ ಬೆಂಬಲ ಸೂಚಿಸೋದಕ್ಕೆ ಪಾದಯಾತ್ರೆ ಮಾಡ್ತಾರೋ, ಇಲ್ಲಾ ವಿರೋಧ ಮಾಡ್ತಾರೋ ಹೇಳಬೇಕು. ವೈಯುಕ್ತಿಕವಾಗಿ, ರಾಜಕೀಯವಾಗಿ ಕರಲವರಿಗೆ ಲಾಭವಾಗಬಹುದು ಕೇಂದ್ರ ಸರ್ಕಾರವೇ 4 ವರ್ಷದಿಂದ ಸಾಲಮನ್ನಾ ಮಾಡಲಿಲ್ಲ ಎಂದ್ರು.
ಪ್ರತ್ಯೇಕ ರಾಜ್ಯಕ್ಕಾಗಿ ಬಂದ್ ಗೆ ಕರೆ ನೀಡಿರೋರು ಯಾರು?
ಆ ಸಂಘಟನೆ ಅವರಿಗೆ ಕೇಳ್ತೀನಿ ಈಗ ಎರಡು ತಿಂಗಳಿನಿಂದ ಶುರುವಾಗಿದ್ಯಾ ಇದು? ಅಭಿವೃದ್ಧಿ ಎಷ್ಟಾಗಿದೆ ಅನ್ನೋದನ್ನ ಚರ್ಚೆ ಮಾಡಲಿ ಸಾರ್ವಜನಿಕವಾಗಿ ಚರ್ಚೆಗೆ ನಾನು ಸಿದ್ಧನಿದ್ದೇವೆ, ಆ ಸಂಘಟನೆ ಅವರನ್ನು ಕರೆಯುತ್ತೇವೆ, ಚರ್ಚೆ ಮಾಡಲಿ ಅವರು ಎಂದು ಸವಾಲೆಸೆದ್ರು.









