ಬೆಂಗಳೂರು: ಕರಾವಳಿಯಲ್ಲಿ ಸಂಭವಿಸಿದ ನೆರೆ ಅನಾಹುತಕ್ಕೆ ಅನುದಾನ ನೀಡುವ ಕುರಿತು ಸಿಎಂ ಯಾವುದೇ ಸ್ಪಷ್ಟನೆ ನೀಡಿಲ್ಲ ಹಾಗಾಗಿ ಸೋಮವಾರದಂದು ಬೆಂಗಳೂರು ಸೇರಿದಂತೆ ಮಂಗಳೂರು, ಕರಾವಳಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಹೇಳಿದ್ರು.
ಬಜೆಟ್ ಮೇಲಿನ ಚರ್ಚೆ ಕುರಿತು ಸಿಎಂ ಕುಮಾರಸ್ವಾಮಿ ಉತ್ತರಕ್ಕೆ ತೀವ್ರ ಅಸಮಧಾನ ವ್ಯಕ್ಯಪಡಿಸಿದ ಸುನೀಲ್ ಕುಮಾರ್,ಕರಾವಳಿ ಕರ್ನಾಟಕದ ಬಗ್ಗೆ ಸಿಎಂ ರಿಂದ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ.ಮೀನುಗಾರ ಸಮಸ್ಯೆ ಮೀನುಗಾರ ಮಹಿಳೆಯರಿಗೆ ಸಾಲದ ಬಗ್ಗೆ ಚಕಾರ ಎತ್ತಿಲ್ಲ.ಕರಾವಳಿಯಲ್ಲಿ ಮಳೆಯಿಂದಾದ ಅನಾಹುತಗಳು ಸಂಭವಿಸಿದೆ.ಆದ್ರೆ ಇದಕ್ಕೆ ಅನುದಾನದ ಕೊಡುವ ಬಗ್ಗೆ ಸಿಎಂ ಸ್ಪಷ್ಟನೆ ಕೊಟ್ಟಿಲ್ಲ.ಹೀಗಾಗಿ ಸರ್ಕಾರದ ಈ ಧೋರಣೆ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದ್ರು.









