ಮುಂಬಯಿ: ಹಿಂದಿ ಚಿತ್ರರಂಗದ ಹಿರಿಯ ಪೋಷಕ ನಟಿ ರೀಟಾ ಭಾದುರಿ ಮೂತ್ರ ಪಿಂಡ ಸಮಸ್ಯೆಯಿಂದ ಇಂದು ಇಹಲೋಕ ತ್ಯಜಿಸಿದ್ದಾರೆ.
62 ವರ್ಷ ಪ್ರಾಯದ ಹಿರಿಯ ನಟಿ ರೀಟಾ ಬಾಧುರಿ 70 ರಿಂದ 90 ರ ದಶಕದಲ್ಲಿ ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದರು. ಸಾವನ್ ಕೋ ಆನೆ ದೋ, ರಾಜಾ ಹಿಟ್ ಚಿತ್ರಗಳು. ರಾಜಾ ಚಿತ್ರದ ನಟನೆಗೆ ಫಿಲ್ಮ್ ಫೇರ್ ಪ್ರಶಸ್ತಿಗೂ ಭಾಜನರಾಗಿದ್ದರು.
70 ಕ್ಕೂ ಹೆಚ್ಚು ಚಿತ್ರಗಳು ಮತ್ತು ಕಿರುತೆರೆಯಲ್ಲೂ ಬಣ್ಣ ಹಚ್ಚಿದ್ದ ರೀಟಾ ಅವರು ಕೊನೆಯದಾಗಿ ಅಭಿನಯಿಸಿರುವ ನಿಮ್ಕಿ ಮುಖೀಯಾ ಧಾರಾವಾಹಿ ಸದ್ಯ ಪ್ರಸಾರವಾಗುತ್ತಿದೆ.









