ಮೈಸೂರು:ಯುವಕನೋರ್ವನೊಂದಿಗಿನ ಪ್ರೀತಿಯನ್ನು ಒಪ್ಪದೆ ಬೇರೊಬ್ಬನೊಂದಿಗೆ ಮದುವೆ ಮಾಡಲು ಮುಂದಾಗಿದ್ದ ಪೋಷಕರಿಗೆ ಯುವತಿ ಶಾಕ್ ನೀಡಿದ್ದಾಳೆ,ಮದುವೆ ಮನೆಯಿಂದಲೇ ಓಡಿ ಹೋದ ಮದುಮಗಳು ಪ್ರಿಯಕರನನ್ನು ಸೇರಿದ ಘಟನೆ ನಡೆಯಿತು.
ಯವತಿಯ ಇಷ್ಟಕ್ಕೆ ವಿರುದ್ಧವಾಗಿಯೂ ಬೇರೊಬ್ಬ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಿದ್ದ ಪೋಷಕರು
ಹುಲ್ಲಹಳ್ಳಿ ಶ್ರೀಕಂಠೇಶ್ವರ ಕಲ್ಯಾಣಮಂಟಪದಲ್ಲಿ ಮದುವೆ ಕಾರ್ಯ ನಡೆಸಿದ್ದರು.ಎಲ್ಲರೂ ಮದುವೆ ಮನೆಯಲ್ಲಿಸಡಗ ಸಂಭ್ರಮದಿಂದ ಓಡಾಡುತ್ತಿದ್ದರು.ವರನ ಕಡೆಯವರೂ ಕಲ್ಯಾಣ ಮಂಟಪಕ್ಕೆ ಬಂದಿದ್ದರು.ಇನ್ನೇನು ಬೆಳಗ್ಗೆ ತಳಕಟ್ಟಬೇಕು ಎನ್ನುವುದು ಮಾತ್ರ ಉಳಿದಿತ್ತು. ಅಷ್ಟರಲ್ಲಿ ರಾತ್ರಿಯೇ ಮದುಮಗಳು ನಂದಿನಿ ಸ್ನೇಹಿತರ ಕೈಲಿ ಚೀಟಿ ಬರೆದುಕೊಟ್ಟು ಕಲ್ಯಾಣ ಮಂಟಪದಿಂದ ಎಸ್ಕೇಪ್ ಆಗಿದ್ದಾಳೆ.ಎಚ್.ಡಿ.ಕೋಟೆಯ ವಧು ತಾನು ಪ್ರೀತಿಸುತ್ತಿದ್ದ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.
ಬೇರೊಬ್ಬನನ್ನು ಪ್ರೀತಿಸುತ್ತಿದ್ದ ವಿಚಾರ ಮನೆಯವರಿಗೆ ಹೇಳಿದರೂ ಬಲವಂತದಿಂದ ಮೈಸೂರಿನ ಮಾರ್ಬಳ್ಳಿಯ ಕೃಷ್ಣ ನಾಯಕ್ ಎನ್ನುವ ಯುವಕನೊಂದಿಗೆ ಮದುವೆ ಮಾಡಿಸಲು ಪೋಷಕರು ಮಾಡಿದ್ದರು ಎನ್ನಲಾಗಿದೆ.
ಮಗಳು ಮದುವೆ ಮನೆಯಿಂದ ಓಡಿಹೋದ ಬಳಿಕ ಪೋಷಕರು ಕಂಗಾಲಾಗಿದ್ದರೆ,ಮದುವೆ ನಿಲ್ಲುವ ಆತಂಕಕ್ಕೆ ಸಿಲುಕಿದ ವರನ ಕಡೆಯುವರು ಅಲ್ಲಿಯೇ ಅವರ ಸಂಬಂಧಿಕರ ಕಡೆಯಲ್ಲಿಯೇ ಓರ್ವ ಯುವತಿಯನ್ನು ನೋಡಿ ಮದುವೆ ಮಾಡಿ ಮುಗಿಸಿದರು. ಮದುವೆಯೇನೋ ಆಯಿತು.ಆದರೆ ಮದುಮಗಳು ಮಾತ್ರ ಬದಲಾಗಿತ್ತು ಅಷ್ಟೇ.









