ಬೆಂಗಳೂರು:ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಜೊತೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ದೋಸ್ತಿ ಮತ್ತೆ ಚಿಗುರಿದಂತೆ ಕಂಡುಬಂದಿದೆ.ಉಮ್ರಾ ಖರ್ಜೂರ ನೀಡಿದ್ದರ ಫಲವೋ ಏನೋ ಗೊತ್ತಿಲ್ಲ ಆದರೆ ಜಮೀರ್ ಅಹಮದ್ ರ ಎರಡು ಕನಸನ್ನು ಎಚ್ಡಿಕೆ ಈಡೇರಿಸಿದ್ದಾರೆ.
ಅಡ್ಡಮತದಾನದ ನಂತರ ಕುಮಾರಸ್ವಾಮಿ ಜೊತೆ ಮುನಿಸಿಕೊಂಡು ದಳದುಂದ ಜಾರಿ ಕೈ ಸೇರಿಕೊಂಡಿರುವ ಸಚಿವ ಜಮೀರ್ ಅಹಮದ್ ಹಾಗು ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ಮತ್ತೆ ಸ್ನೇಹ ಚಿಗುರಿಡೆದ ಸುಳಿವು ಸಿಕ್ಕಿದೆ.
ಮೊದಲನೆಯದಾಗಿ ಕಾಂಗ್ರೆಸ್ ಕೋಟಾದಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿರುವ ಜಮೀರ್ ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಬಳಸುತ್ತಿದ್ದ ಸರ್ಕಾರಿ ಕಾರು ಫಾರ್ಚುನರ್ ನೀಡುವಂತೆ ಸಿಎಂಗೆ ಬೇಡಿಕೆ ಇಟ್ಟಿದ್ದರು.ಮೊದಲು ಅದನ್ನು ನಿರಾಕರಿಸಿದ್ದ ಸಿಎಂ ನಂತರ ಅದೇಕೋ ಸಿದ್ದರಾಮಯ್ಯ ಬಳಸುತ್ತಿದ್ದ ಕೆಎ 01, ಜಿ 5734 ನಂಬರಿನ ಫಾರ್ಚುನರ್
ಕಾರನ್ನೇ ಜಮೀರ್ ಗೆ ನೀಡಿದರು.
ಅಷ್ಟಕ್ಕೆ ಸುಮ್ಮನಾಗದ ಸಚಿವ ಜಮೀರ್ ತಮಗೇ ಸ್ಯಾಂಕಿ ಟ್ಯಾಂಕ್ ಬಳಿಯ ನಂಬರ್ 30 ನಿವಾಸ ಬೇಕೆಂದು ಹೊಸ ಬೇಡಿಕೆ ಮುಂದಿಟ್ಟರು.ಮಂಜೂರಾಗಿದ್ದ ಜಯಮಹಲ್ ನಿವಾಸವನ್ನು ನಿರಾಕರಿಸಿದ್ದರು. ಆದರೆ ಆ ನಿವಾಸವನ್ನು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರಿಗೆ ನೀಡಿದ್ದರೂ ಕೂಡ ಮತ್ತೆ ಆ ನಿವಾಸವನ್ನೇ ಜಮೀರ್ ನೀಡುವ ಅಭಯ ನೀಡಿದ್ದಾರೆ.ಈ ಸಂಬಂಧ ಜಿಟಿಡಿ ಜೊತೆ ಸಿಎಂ ಮಾತುಕತೆ ನಡೆಸಿ ಮನೆ ಬದಲಾವಣೆಗೆ ಒಪ್ಪಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಇದಕ್ಕೆಲ್ಲಾ ಜಮೀರ್ ಅಹಮದ್ ಸಿಎಂ ಕುಮಾರಸ್ವಾಮಿಯವರಿಗೆ ಉಮ್ರಾ ಖರ್ಜೂರ ನೀಡಿದ್ದರ ಫಲ ಎನ್ನಲಾಗುತ್ತಿದೆ.ಇತ್ತೀಚೆಗಷ್ಟೇ ಸಿಎಂ ರನ್ನು ಭೇಟಿಯಾಗಿ ಖರ್ಜೂರ ನೀಡಿ ಬಂದಿದ್ದರು.









