ಸಾಲಮನ್ನಾ ವಿಚಾರದಲ್ಲಿ ನನ್ನ,ಡಿಸಿಎಂ ನಡುವೆ ಗೊಂದಲವಿಲ್ಲ: ಸಿಎಂ

0
14

 

ಬೆಂಗಳೂರು:ರಾಜ್ಯದ ರೈತರ ಸಾಲಮನ್ನಾ ವಿಚಾರದಲ್ಲಿ
ನನ್ನ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ನಡುವೆ ಯಾವುದೇ ರೀತಿಯ ಗೊಂದಲ ಇಲ್ಲ,ಆದಷ್ಟು ಬೇಗ ಸಾಲಮನ್ನಾ ಘೋಷಣೆಯಾಗಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಡಿಸಿಎಂ ಪರಮೇಶ್ವರ್ ಸಾಲಮನ್ನಾ ಮಾಡೊಲ್ಲ ಅಂತ ಹೇಳಿಲ್ಲ.ಗಡುವು ಕೊಡುವುದು ಬೇಡ ಎಂದು ಹೇಳಿದ್ದಾರೆ ಅಷ್ಟೇ.ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ,ಯಾರೂ ಅನುಮಾನ ಪಡುವ ಅಗತ್ಯವೂ ಇಲ್ಲ, ಸಾಲಮನ್ನಾ ವಿಚಾರದಲ್ಲಿ ಯಾರಿಗೆ ಸಂಶಯ ಬೇಡ,ಸಾಲಮನ್ನಾ ಘೋಷಣೆ ಆಗಲಿದೆ,ಸರ್ಕಾರಿ ಆದೇಶವೂ ಹೊರಬೀಳಲಿದೆ ಎಂದರು.

ಬಜೆಟ್ ಮಂಡನೆ ಮಾಡುತ್ತೇನೆ.ಹೊಸ ಸರ್ಕಾರವಾಗಿ ಹಲವು ಕಾರ್ಯಕ್ರಮ ನೀಡಬೇಕು.ರೈತರ ಸಾಲಮನ್ನಾ ಮಾಡಲು
ಅವಶ್ಯಕವಾದ ಹಣ ಕ್ರೂಡೀಕರಣ ಮಾಡ್ತಿದ್ದೇನೆ. ಹಣಕಾಸು ಸಚಿವನಾಗಿ ಹೇಳ್ತಿದ್ದೇನೆ. ಏನು ಮಾಡಬೇಕೋ ಅದನ್ನ ನಾನು ಮಾಡೇ ಮಾಡುತ್ತೇನೆ.ಸಾಲಮನ್ನಾ ಮಾಡಲು ಕಾಂಗ್ರೆಸ್ ಕೂಡಾ ತಯಾರಿದೆ ನಾವೂ ತಯಾರಿದ್ದೇವೆ.ಇದರಲ್ಲಿ ಯಾವುದೇ ಗೊಂದಲ ನಮ್ಮಲ್ಲಿ ಇಲ್ಲ.ಜನರ ಮುಂದೆ ಹೇಳಿದ ಎಲ್ಲಾ ಕಾರ್ಯಕ್ರಮ ಜಾರಿಗೆ ತರುತ್ತೇನೆ.ಕಾಂಗ್ರೆಸ್ ಪ್ರಣಾಳಿಕೆ ಕಾರ್ಯಕ್ರಮಗಳು ಜಾರಿ ಆಗುತ್ತವೆ ಎಂದರು.

ಬಜೆಟ್ ಬಗ್ಗೆ ನಮ್ಮಲ್ಲಿ ಗೊಂದಲ ಇಲ್ಲ.ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ರೈತರ ಸಾಲ ಮನ್ನಾ ವಿಚಾರವು ಇದೆ.ಇದರಲ್ಲಿ ಅನಗತ್ಯ ಗೊಂದಲ ಬೇಡ
ಹೆಲ್ಫೇಜ್ ಇಂಡಿಯಾ ಸರ್ವೇ ವರದಿ ತರಿಸಿ ಪರಿಶೀಲನೆ ನಡೆಸುತ್ತೇವೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೃದ್ಧರ ಕಡೆಗಣನೆ ಹೆಚ್ಚು ಎಂಬ ವರದಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಹೊಸ ಸರ್ಕಾರದಲ್ಲಿ ಹಲವು ಹೊಸ ಯೋಜನೆ ಘೋಷಿಸಬೇಕು.ಅದಕ್ಕೆ ಬಜೆಟ್ ಮಂಡನೆಯಾಗಬೇಕು.ನನ್ನ ಬಜೆಟ್ ಯಾವುದೇ ಒಂದು ವರ್ಗಕ್ಕೆ ಮೀಸಲಿರಲ್ಲ.ರಾಜ್ಯದ ಆರೂವರೆ ಕೋಟಿ ಜನರಿಗೆ ಅನುಕೂಲ ಆಗುವ ರೀತಿ ಬಜೆಟ್ ಇರಲಿದೆ.ಸಾರ್ವಜನಿಕ ಹಣ ಪೋಲಾಗದಂತೆ ಎಚ್ಚರಿಕೆ ವಹಿಸಿ ಕಾರ್ಯಕ್ರಮ ಜಾರಿಗೆ‌ ತರಲಾಗುತ್ತದೆ ಎಂದರು.

- Call for authors -

LEAVE A REPLY

Please enter your comment!
Please enter your name here