ಬೆಂಗಳೂರು: ಕಾಫೀ ಎಸ್ಟೇಟ್ನಲ್ಲಿ ಶೂಟಿಂಗ್ ಮಾಡುವುದಾಗಿ ಅದನ್ನು ಬಳಸಿಕೊಂಡು ಬಾಡಿಗೆ ಹಣ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ನಟ, ನಿರ್ಮಾಪಕ ಕಿಚ್ಚ ಸುದೀಪ್ ವಿರುದ್ಧ ದೂರು ದಾಖಲಾಗಿದೆ.
ವಂಚಿತ ದೀಪಕ್ ಎಂಬುವರು ಫಿಲ್ಮ್ ಚೇಂಬರ್ನಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ. ಸುದೀಪ್ ನಿರ್ಮಾಣದಲ್ಲಿ ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿದ್ದ ವಾರಸ್ದಾರ ಧಾರಾವಾಹಿ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನ ಕಾಫೀ ಎಸ್ಟೇಟ್ನ್ನು ಬಾಡಿಗೆಗೆ ಪಡೆಯಲಾಗಿತ್ತು. ಅಲ್ಲದೆ, 500 ವರ್ಷದ ಹಿಂದಿನ ಮನೆಯನ್ನು ಶೂಟಿಂಗ್ಗೆ ಬಳಸಿಕೊಂಡಿದ್ದರು.
ಆದರೆ, ಶೂಟಿಂಗ್ ಮಾಡಿಕೊಂಡು ಯಾವುದೇ ಬಾಡಿಗೆ ನೀಡಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ವಂಚಿತ ದೀಪಕ್ ಚಲನಚಿತ್ರ ವಾಣಿಜ್ಯ ಮಂಡಳಿಯ ಕದ ತಟ್ಟಿದ್ದಾರೆ. ಅಧ್ಯಕ್ಷರಾದ ಚಿನ್ನೇಗೌಡರು ದೂರು ಸ್ವೀಕರಿಸಿದ್ದಾರೆ.









