ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಪಕ್ಷ ವಿಷವನ್ನು ನೀಡಿಲ್ಲ,ಅಮೃತವನ್ನೇ ನೀಡಿದೆ,ಕಷ್ಟ ಸುಖ ಎರಡೂ ಪಕ್ಷ ಹಂಚಿಕೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕರ ಡಾ.ಸುಧಾಕರ್ ಹೇಳಿದ್ದಾರೆ.
ನಾನು ವಿಷವನ್ನೇ ಉಣ್ಣುತ್ತಿರುವ ವಿಷಕಂಠ ಎಂಬ ಸಿಎಂ ಹೇಳಿಕೆಗೆ ಕೈ ಶಾಸಕ ಡಾ.ಸುಧಾಕರ್ ಪ್ರತಿಕ್ರಿಯೆ ನೀಡಿ,
ಅವರಿಗೆ ಕಾಂಗ್ರೆಸ್ ಪಕ್ಷ ಅಮೃತವನ್ನೇ ಕೊಟ್ಟಿದೆ ಕುಮಾರಸ್ವಾಮಿಯವರಿಗೆ ವಿಷವನ್ನೇನು ಕೊಟ್ಟಿಲ್ಲ ಯಾರೂ ಕೂಡ ಊಹೆಮಾಡಿಕೊಳ್ಳಲು ಸಾಧ್ಯವಿಲ್ಲ 37 ಶಾಸಕರಿರುವ ಪಕ್ಷಕ್ಕೆ ನಾವು ಸಹಕಾರ ನೀಡಿದ್ದೇವೆ ನಮ್ಮ ಕಾರ್ಯಕ್ರಮ ಇಲ್ಲದಿದ್ದರೂ ನಾವು ಒಪ್ಪಿದ್ದೇವೆ ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ ನಾವು 80,ಅವರು37 ಶಾಸಕರಿದ್ದೇವೆ ಎಂದ್ರು.
ಸಿಎಂ ಆರೂವರೆ ಕೋಟಿ ಜನರ ಕಣ್ಣೀರು ಒರೆಸಬೇಕು ಅದು ಬಿಟ್ಟು ನೀವೇ ಅಳುವುದು ಬೇಡ ನೀವೇ ಅತ್ತರೆ ನಿಮ್ಮ ಕಣ್ಣೀರು ಒರೆಸುವವರು ಯಾರು? ನಾವು ನಿಮ್ಮಹಿಂದೆ ಇದ್ದೇವೆ
ಕಷ್ಟ ಸುಖ ಇಬ್ಬರೂ ಹಂಚಿಕೊಳ್ಳೋಣ ನಮ್ಮ ಕಾರ್ಯಕ್ರಮ ನಿಮಗೂ ಕಿರ್ತಿ ತರುತ್ತೆ ಸಾಲಮನ್ನಾ ನಿಮಗೂ,ನಮಗೂ ಕೀರ್ತಿ ತರಲಿದೆ ಎಂದ್ರು.
ಸಚಿವ ಸ್ಥಾನ ಸಿಗದೆ ಅಸಮಾಧಾನ ವಿಚಾರ ಸಂಬಂಧ ಮಾತನಾಡಿದ ಸುಧಾಕರ್ ನಾನು ಅಧಿಕಾರ ಕೊಡಿ ಅಂತ ಕೇಳುವುದಕ್ಕೆ ಹೋಗಿಲ್ಲ ಅದಾಗೆ ಬಂದರೆ ನಾನೇನು ಸನ್ಯಾಸಿಯಲ್ಲವಲ್ಲ ಕೊಟ್ಟ ಕೆಲಸ ಸಮರ್ಥವಾಗಿ ನಿಭಾಯಿಸುತ್ತೇನೆ ಕೊಡದಿದ್ದರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದ್ರು.









