ಬೆಂಗಳೂರು:ಜುಲೈ 5 ರಂದು ರಾಜ್ಯ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಬಜೆಟ್ ಗೂ ಮುನ್ನವೇ ಮೈತ್ರಿ ಪಕ್ಷಗಳ ಸರಣಿ ಸಭೆ ನಡೆಯಲಿವೆ, ಬಜೆಟ್ ನಲ್ಲಿ ಏನಿರಬೇಕು ಎನ್ನುವ ಕುರಿತು ವಿಸ್ತೃತ ಚರ್ಚ ನಡೆಯಲಿದ್ದು,ಸಾಲಮನ್ನಾಗೆ ಒಪ್ಪಿಗೆ ಸಿಗುತ್ತಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.
ಜೂನ್ 29 ರಂದು ಕೇಂದ್ರದ ಮಾಜಿ ಸಚಿವ ಎಂ. ವೀರಪ್ಪ ಮೊಯ್ಲಿ ನೇತೃತ್ವದ ಕಾಮನ್ ಮಿನಿಮಮ್ ಕಮಿಟಿ ಸಭೆ ನಡೆಯಲಿದೆ.ನಂತರ ಕಮಿಟಿಯು ಜೂನ್ 30 ರಂದು ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿ ಸಭೆಯಲ್ಲಿ ಸಾಮಾನ್ಯ ಕಾರ್ಯಕ್ರಮಗಳ ಕುರಿತ ವರದಿ ಸಲ್ಲಿಕೆ ಮಾಡಲಿದೆ.ಸಿದ್ದು ನೇತೃತ್ವದ ಸಮನ್ವಯ ಸಮಿತಿಗೆ ವರದಿ ಶಿಫಾರಸು ಮಾಡಲಿದ್ದು, ಸಮನ್ವಯ ಸಮಿತಿ ಸಭೆಯಲ್ಲಿ ಮೊಯ್ಲಿ ವರದಿ ಕುರಿತ ಚರ್ಚೆ ನಡೆಯಲಿದೆ.
ಯಾವ ಕಾರ್ಯಕ್ರಮಗಳನ್ನ ಬಜೆಟ್ ನಲ್ಲಿ ಸೇರಿಸಬೇಕು ಯಾವ ಕಾರ್ಯಕ್ರಮ ಬಜೆಟ್ ನಲ್ಲಿ ಸೇರಿಸುವುದು ಬೇಡ ಎನ್ನುವುದು ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರವಾಗಲಿದೆ.ರೈತರ ಸಾಲಮನ್ನಾ ಘೋಷಣೆಗೂ ಸಿದ್ದು ನೇತೃತ್ವದ ಕಮಿಟಿಯಿಂದ ಒಪ್ಪಿಗೆ ಸಿಗುತ್ತಾ ಎನ್ನುವ ಪ್ರಶ್ನೆ ಉದ್ಭವಿಸಿದೆ.









