ಬೆಂಗಳೂರು: ದೇಶದಲ್ಲಿ ಕೊರೋನಾದ ಮಹಾ ಸ್ಪೋಟ ಸಂಭವಿಸಿದೆ. ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಬರೋಬ್ಬರಿ 5 ಲಕ್ಷದ ಗಡಿ ದಾಟಿ ಮತ್ತಷ್ಟು ಏರಿಕೆಯಾಗುತ್ತಲೇ ಇದೆ. ಒಂದೇ ದಿನ ದಾಖಲೆಯ 18552 ಹೊಸ ಕೇಸ್ ದಾಖಲಾಗಿದ್ದು, 384 ಸೋಂಕಿತರು ಬಲಿಯಾಗಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಕೊರೋನಾ ಸೋಂಕು ಯಾರನ್ನ ಎಲ್ಲಿ ಹೇಗೆ ವಕ್ಕರಿಸುತ್ತೋ ಸಣ್ಣ ಸುಳಿವೂ ಕೂಡ ಸಿಗುತ್ತಿಲ್ಲ. ಕಣ್ಣಿಗೆ ಕಾಣದ ಡೆಡ್ಲಿ ವೈರಸ್ ಜನರ ಮೈಗಂಟಿಕೊಳ್ಳುತ್ತಲೇ ಇದೆ. ದಿನಕ್ಕೆ ನೂರಾರು ಜನರನ್ನು ಉಸಿರು ಬಿಗಿದು ಕೊಲ್ಲುತ್ತಲೇ ಇದೆ. ಹೌದು ದೇಶವನ್ನು ತನ್ನ ಕಪಿಮುಷ್ಠಿಗೆ ತೆಗೆದುಕೊಂಡಿರುವ ಮಹಾಮಾರಿ ಇಡೀ ಭಾರತವನ್ನು ಕೊರೋನಾ ಭಾರತವನ್ನಾಗಿ ಪರಿವರ್ತಿಸುತ್ತಿದೆ.
ಒಂದೇ ದಿನದಲ್ಲಿ 18,552 ಹೊಸ ಪ್ರಕರಣಗಳು ಪತ್ತೆಯಾಗಿದ್ದಲ್ಲದೇ 384 ಸೋಂಕಿತರನ್ನು ಕೇವಲ 24 ಗಂಟೆಗಳಲ್ಲಿ ಬಲಿ ಪಡೆದಿದೆ. ಆ ಮೂಲಕ ಕೊರೋನಾ ಭಾರತದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 5 ಲಕ್ಷದ ಗಡಿ ದಾಟಿ ಮುಂದೋಗಿದೆ. ದೇಶದಲ್ಲಿ ಒಟ್ಟು 15,685 ಸೋಂಕಿತರು ಮೃತಪಟ್ಟಿದ್ದಾರೆ.









