ಬೆಂಗಳೂರು: 12 ನೇ ಆವೃತ್ತಿಯ ಏರ್ ಶೋಗೆ ಸಿಲಿಕಾನ್ ಸಿಟಿಯಲ್ಲಿ ಚಾಲನೆ ಸಿಕ್ಕಿದೆ, ಐದುದಿನಗಳ ಕಾಲ ಯಲಹಂಕ ವಾಯು ನೆಲೆಯಲ್ಲಿ ಲೋಹದ ಹಕ್ಕಿಗಳು ಸಾಹಸ ಪ್ರದರ್ಶನ ನಡೆಯಲಿದ್ದು ವೈಮಾನಿಕ ಕ್ಷೇತ್ರದ ದೊಡ್ಡ ಮಟ್ಟದ ವಹಿವಾಟಿಗೂ ಏರೋ ಇಂಡಿಯಾ ಸಾಕ್ಷಿಯಾಗಲಿದೆ.
ಯಲಹಂಕ ವಾಯು ನೆಲೆಯಲ್ಲಿ ಏಷ್ಯಾದ ಅತಿದೊಡ್ಡ ಏರ್ ಶೋಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಸರಾಮನ್ ಚಾಲನೆ ನೀಡಿದರು.ಪೈಲಟ್ ಸಾಹಿಲ್ ಗಾಂಧಿ ನಿಧನಕ್ಕೆ ಒಂದು ನಿಮಿಷ ಮೌನ ಆಚರಿಸಿ ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ವೈಮಾನಿಕ ಪ್ರದರ್ಶನ ವೀಕ್ಷಿಸಿ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.
ಈ ವೇಳೆ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್,ಬೆಂಗಳೂರಿಗೆ ಏರೋ ಇಂಡಿಯಾ ದೊಡ್ಡ ಹೆಮ್ಮೆಯ ಸಮಾರಂಭ.12 ನೇ ಏರ್ ಶೋ ಕೂಡಾ ಬೆಂಗಳೂರಲ್ಲೇ ನಡೆಯುತ್ತಿರುವುದು ಖುಷಿಯ ವಿಚಾರ, 600 ಭಾರತೀಯ ಕಂಪೆನಿಗಳು ಮತ್ತು 400 ವಿದೇಶಿ ಕಂಪೆನಿಗಳು ಭಾಗಿಯಾಗುತ್ತಿವೆ,ನಾಗರಿಕ ವಿಮಾನಯಾನ ಕೂಡ ಈ ಬಾರಿ ಕೈಜೋಡಿಸಿದೆ.ಏರೋ ಇಂಡಿಯಾ ಕಾರ್ಯಕ್ರಮ ವಿಮಾನಯಾನ ಮತ್ತು ವೈಮಾನಕ ಕ್ಷೇತ್ರವನ್ನು ಇದೇ ಮೊದಲ ಬಾರಿಗೆ ಒಂದೆಡೆ ಸೇರಿಸಿದೆ ಭಾರತವನ್ನು ವಿಶ್ವದ ದಿಗ್ಗಜರ ಜೊತೆ ನಿಲ್ಲಿಸುವ ಕೆಲಸವನ್ನು ಏರ್ ಶೋ ಮಾಡುತ್ತದೆ ಮೇಕ್ ಇನ್ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಬಹಳ ಒತ್ತು ಕೊಟ್ಟಿದ್ದಾರೆ ಐಟಿ ಸೆಕ್ಟರ್ ಒಟ್ಟಾರೆ ಆದಾಯ ಮತ್ತು ಜಿಡಿಪಿಗೆ ಬಹುದೊಡ್ಡ ಕೊಡುಗೆ ಕೊಡ್ತಿದೆ, ಅದ್ರಲ್ಲೂ ಬೆಂಗಳೂರು ಈ ವಿವಾರದಲ್ಲಿ ಮುಂಚೂಣಿಯಲ್ಲಿದೆ ಎಂದ್ರು.
127,500 ಕೋಟಿ ಹಣವನ್ನು ರಕ್ಷಣಾ ಇಲಾಖೆಯಿಂದ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಯುದ್ಧೋಪಕರಣಗಳ ಕೊಳ್ಳುವಿಕೆಗೆ ಖರ್ಚುಮಾಡಲಾಗಿದೆ, ಇದು ನಮ್ಮ ದೇಶದ ವಹಿವಾಟಿಗೆ ಬಹುದೊಡ್ಡ ಬೆಂಬಲ ನೀಡಲಿದೆ,ಬೇರೆ ದೇಶಗಳಿಗಿಂತ ಹೆಚ್ಚಾಗಿ ನಮ್ಮ ದೇಶದ ವೆಂಡರ್ಸ್ ಗೆ ಇದರ ಆರ್ಡರ್ ಕೊಡಲಾಗ್ತಿದೆ, ವಿದೇಶಿ ಹೂಡಿಕೆ 42% ಅವಕಾಶವಿದೆ, ಉಳಿದದ್ದು ಸರ್ಕಾರವೇ ಮಾಡಲಿದೆ,237 ಕೋಟಿಗೆ ಅವಕಾಶ ನೀಡಲಾಗಿತ್ತು, ಅದರಲ್ಲಿ ಈಗಾಗಲೇ 200 ಕೋಟಿ ಬಳಕೆಯಾಗಿದೆ, ಹೊಸೂರು ಮತ್ತು ಉತ್ಯರಪ್ರದೇಶದಲ್ಲಿ ಹೆಚ್ಚಿನ ರಕ್ಷಣಾ ಪರಿಕರಗಳ ತಯಾರಿಕೆ ನಡೆಯುತ್ತಿದೆ,ನಮ್ಮ ದೇಶದಲ್ಲಿ ತಯಾರಾಗುವ ಅನೇಕ ವಿಮಾನಗಳು, ವೈಮಾನಿಕ ಪರಿಕರಗಳು ನೇಪಾಳ, ಇಸ್ರೇಲ್, ರಷ್ಯಾ, ಬೋಟ್ಸ್ವಾನಾ, ಮೊರೀಶಿಯಸ್ ಗಳಿಗೆ ರಫ್ತಾಗುತ್ತಿವೆ
ಇದೆಲ್ಲಾ ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ವಿಚಾರ ಎಂದ್ರು
ನಂತರ ಮಾತನಾಡಿದ
ಕೇಂದ್ರ ಸಿವಿಲ್ ಏವಿಯೇಶನ್ ಸಚಿವ ಸುರೇಶ್ ಪ್ರಭು
ನಮ್ಮ ದೇಶದ ವೈಮಾನಿಕ ಉದ್ಯಮ ಕಳೆದ ನಾಲ್ಕು ವರ್ಷಗಳಲ್ಲಿ ಶತಮಾನದ ಎ.30 ಹೆಚ್ಚಿದೆ, ಮುಂದಿನ ನಾಲ್ಕೈದು ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ,65 ಬಿಲಿಯನ್ ಡಾಲರ್ಸ್ ನಲ್ಲಿ 103 ಹೊಸ ಏರ್ಪೋರ್ಟ್ ಗಳು ಭಾರತದಲ್ಲಿ ಆರಂಭವಾಗಲಿದೆ ದೇಶದ ಮೂರು ಮೂಲೆಗಳಿಗೆ ವಿಮಾನ ಪ್ರಯಾಣ ದೊರೆಯಲಿದೆ,ಸಣ್ಣ ಊರುಗಳಲ್ಲಿ ಕೂಡಾ ವಿಮಾನ ಹಾರಾಟ ನಡೆಯಲಿದೆ, ವಿಶನ್ 2040 ಎನ್ನುವ ಗುರಿಯಿಟ್ಟುಕೊಂಡಿದ್ದೇವ 2300 ಹೊಸ ವಿಮಾನಗಳು ಭಾರತಕ್ಕೆ ಅವಶ್ಯಕತೆ ಇದೆ, ಹೆಚ್ಚಿನ ಪ್ರಮಾಣದಲ್ಲಿ ಆ ವಿಮಾನಗಳನ್ನು ನಮ್ಮ ದೇಶದಲ್ಲೇ ತಯಾರಿಸುವ ಉದ್ದೇಶವಿದೆ,ನಾವು ಅನೇಕ ದೇಶಗಳ ಜೊತೆ ಚರ್ಚಿಸಿ ವೈಮಾನಿಕ ಉದ್ಯಮ ಹೆಚ್ಚಿಸುವಲ್ಲಿ ಕಾರ್ಯನಿರತವಾಗಿದ್ದೇವ ಎಲ್ಲಾ ಉದ್ಯಮದವರಿಗೂ ಈ ಏರ್ ಶೋ ಒಳ್ಳೆ ಅವಕಾಶ ನೀಡಲಿದೆ, ಏರೋ ಇಂಡಿಯಾ ನಮ್ಮ ಹೆಮ್ಮೆಯ ಕಾರ್ಯಕ್ರಮ ಎಂದರು.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾತನಾಡಿ ಸಾಹಿಲ್ ಗಾಂಧಿ ನಿಧನಕ್ಕೆ ಸಂತಾಪ ಸೂಚಿಸಿದರು.ರಕ್ಷಣಾ ವಲಯಕ್ಕೆ ಏರೋ ಇಂಡಿಯಾ ಬಹಳ ಪ್ರಾಮುಖ್ಯತೆ ಇರುವ ಕಾರ್ಯಕ್ರಮ ಕಳೆದ ವರ್ಷ ರಾಜ್ಯದ 12 ಟ್ರಿಲಿಯನ್ ಜಿಆರ್ಡಿಪಿ ಇತ್ತು ನಮ್ಮ ರಾಜ್ಯದಲ್ಲಿ ಆವಿಷ್ಕಾರಗಳು, ನೂತನ ಉದ್ಯಮಗಳಿಗೆ ಉತ್ತೇಜನ, ಅವಶ್ಯಕ ಮೂಲಭೂತ ಸೌಕರ್ಯಗಳು ಉತ್ತಮವಾಗಿದೆ ಹಾಗಾಗಿ ಹೆಚ್ಚಿನ ಜನ ಇಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಾರೆ ಎಂದರು.









