ಬೆಂಗಳೂರು:ದೇಶದ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಅರ್ಹತೆ ಪಡೆಯಲು ಮೆಟ್ಟಿಲಾಗಿರುವ ಯಮಾಹಾ ಫ್ಯಾಸಿನೋ ಮಿಸ್ ದಿವಾ ಮಿಸ್ ಯೂನಿವರ್ಸ್ ಇಂಡಿಯಾ 2018 ಗ್ಲಾಮರ್ ಆರಂಭಗೊಂಡಿದೆ.
ಈ ಸ್ಪರ್ಧೆಯ ವಿಜೇತರು ದೇಶದ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಅರ್ಹತೆ ಪಡೆಯಲಿದ್ದು,ಭಾರತದ ಸೌಂದರ್ಯ ಮತ್ತು ಪ್ರತಿಭೆಯನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವುದಕ್ಕಾಗಿ, ಈ ಕಾರ್ಯಕ್ರಮದ ಸಲಹೆಗಾರ್ತಿ ಮತ್ತು ರಾಯಭಾರಿಯಾಗಿರುವ ಲಾರಾ ದತ್ತಾ, ಖುಷಿ, ಸಾಹಸ, ತಮಾಷೆ, ಸ್ಪರ್ಧಾ ಮನೋಭಾವ, ಸಂವೇದನೆ, ಫಿಟ್, ಖುಷಿಯನ್ನೊಳಗೊಂಡ ಒಬ್ಬ ಯುವತಿಯನ್ನು ಕಂಡುಕೊಳ್ಳುವಲ್ಲಿ ಶ್ರಮಿಸಲಿದ್ದಾರೆ.
ದಿವಾಗಳು ತೀವ್ರ ತರಬೇತಿಗೆ ಒಳಪಡುವ ಜೊತೆಗೆ ಮಾಡೆಲ್ ಉದ್ಯಮದಲ್ಲೇ ಉತ್ತಮ ಪರಿಣಿತಿಯನ್ನು ಪಡೆಯತ್ತಾರೆ ಮತ್ತು ಮುಂದಿನ ಯಮಾಹಾ ಫ್ಯಾಸಿನೋ ಮಿಸ್ ದಿವಾ – ಮಿಸ್ ಯೂನಿವರ್ಸ್ ಇಂಡಿಯಾ 2018ರ ಗ್ರ್ಯಾಂಡ್ ಫಿನಾಲೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
ದೇಶಾದ್ಯಂತ ಜೂನ್ 24ರಿಂದ ಆಡಿಷನ್ಗಳು ಆರಂಭವಾಗಲಿವೆ. ಮಿಸ್ ಯೂನಿವರ್ಸ್ಗೆ ಟಿಕೆಟ್ ಪಡೆಯಲು ಜೀವನದಲ್ಲಿ ಒಮ್ಮೆ ಅವಕಾಶವನ್ನು ವಿಜೇತರು ಪಡೆಯಲಿದ್ದಾರೆ. 10 ನಗರಗಳಲ್ಲಿ ಆಡಿಷನ್ಗಳು ನಡೆಯಲಿದ್ದು, ಲಖನೌ, ಕೋಲ್ಕತಾ, ಇಂದೋರ್, ಹೈದರಾಬಾದ್, ಪುಣೆ, ಅಹಮದಾಬಾದ್, ಬೆಂಗಳೂರು, ಚಂಡೀಗಢ ಮತ್ತು ದೆಹಲಿಯಲ್ಲೂ ಜರುಗಲಿದೆ. ಅಂತಿಮ ಕಾರ್ಯಕ್ರಮ ಮುಂಬೈನಲ್ಲಿ ನಡೆಯಲಿದೆ. 4 ಸಿಟಿ ಟೂರ್ ಎಂಬ ಹೊಸ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದ್ದು, ಗೋವಾ, ದೆಹಲಿ, ಚೆನ್ನೈ ಮತ್ತು ಮುಂಬೈನಲ್ಲಿ ಉಪ ಸ್ಪರ್ಧೆ ನಡೆಯಲಿದೆ.
ಲಾರಾ ದತ್ತಾ ಹಾಗೂ ಪ್ಯಾನೆಲಿಸ್ಟ್ಗಳು ಮತ್ತು ತೀರ್ಪುಗಾರರು ದೇಶದ ವಿವಿಧ ಭಾಗದ ಮಿಸ್ ದಿವಾಗಳನ್ನು ವಿವಿಧ ಟಾಸ್ಕ್ಗಳ ಆಧಾರದಲ್ಲಿ ಜಡ್ಜ್ ಮಾಡಲಿದ್ದಾರೆ. ಥೀಮ್ಗಳನ್ನು ವಿವಿಧ ಅಂಶಗಳನ್ನು ಆಧರಿಸಿ ವಿನ್ಯಾಸಗೊಳಿಸಲಾಗುತ್ತದೆ ಮತ್ತು ತೀರ್ಪು ನೀಡಲಾಗುತ್ತದೆ. ರ್ಯಾಂಪ್ ವಾಕ್, ಫೊಟೊ ಶೂಟ್, ಪರ್ಫೆಕ್ಟ್ ಬಾಡಿ, ಸಂವಹನ ಕೌಶಲಗಳು ಮತ್ತು ಇತರೆ ಥೀಮ್ಗಳು ಇರಲಿವೆ.
ಇದು ಭಾರತದ ಶೋ ಟೈಮ್! ಮಿಸ್ ಯೂನಿವರ್ಸ್ 2018 ರಲ್ಲಿ ದೇಶವನ್ನು ಪ್ರತಿನಿಧಿಸುವ ಸುಂದರಿಯನ್ನು ನಾವು ಆಯ್ಕೆ ಮಾಡಲಿದ್ದು, ದೇಶದ ಎಲ್ಲ ಮಹಿಳೆಯರನ್ನೂ ಈ ಸ್ಪರ್ಧೆಗೆ ಆಹ್ವಾನಿಸುತ್ತಿದ್ದೇವೆ ಎಂದು ಯಮಾಹಾ ಫ್ಯಾಸಿನೋ ಮಿಸ್ ದಿವಾ 2018 ತಿಳಿಸಿದೆ.









