ಬೆಂಗಳೂರು: ಮಹದಾಯಿ ನದಿ ನೀರಿಗಾಗಿ ಇನ್ಮುಂದೆ ರೈತರು ಹೋರಾಟ ಮಾಡುವುದು ಬೇಡ.ಸರ್ಕಾರವೇ ಈ ಬಗ್ಗೆ ಹೋರಾಟ ಮಾಡಿ ನೀರು ಪಡೆಯುವ ಪ್ರಯತ್ನ ಮಾಡುತ್ತದೆ ಎಂದು ವಿಧಾನ ಪರಿಷತ್ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವರಾಜ್ ಹೊರಟ್ಟಿ,ಮಹದಾಯಿ ಅಂತಿಮ ತೀರ್ಪು ನೂರಕ್ಕೆ ನೂರರಷ್ಟು ಸಮಧಾನ ತಂದಿಲ್ಲ.ಆದರೂ ಸ್ವಲ್ಪಮಟ್ಟಿಗೆ ಸಮಧಾನ ತಂದಿದೆ.ಗೋವಾದ ನಿಲುವಿನ ಬಗ್ಗೆ ವಿಚಾರ ಮಾಡಿದ್ರೆ ಇಂದಿನ ತೀರ್ಪು ಕೊಂಚ ಸಮಧಾನ. ಮುಂದಿನ ಹೋರಾಟದ ಮೂಲಕ ಹೆಚ್ಚಿನ ನೀರು ಪಡೆಯಲು ಪ್ರಯತ್ನ ನಡೆಸಬೇಕು.ಅಖಂಡ ಕರ್ನಾಟಕದ ಜನರ ಹೋರಾಟದ ಪರಿಣಾಮ ಈ ನೀರು ಸಿಕ್ಕಿದೆ.ವೇಷ್ಟಾಗಿ ಹೋಗುವ ನೀರನ್ನು ರಾಜ್ಯಕ್ಕೆ ಪಡೆಯಲು ಪ್ರಯತ್ನಿಸಬೇಕು.ಇಂದಿನ ತೀರ್ಪು ಉಸಿರಾಡುವಂತೆ ಆಗಿದೆ.ನ್ಯಾಯಾಧಿಕರಣಕ್ಕೆ ಸರ್ಕಾರ ಅಭಿನಂದನೆ ಸಲ್ಲಿಸಿ ಮುಂದಿನ ತಮ್ಮ ಹಕ್ಕು ಪ್ರತಿಪಾದಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ರು.
ಸಿಎಂ ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಹೆಚ್ಚಿನ ನೀರಿಗಾಗಿ ಹಕ್ಕು ಮಂಡನೆ ಮಾಡಬೇಕು. ಹೋರಾಟಗಾರರ ಹೋರಾಟದಿಂದ ಇವತ್ತು ಇಷ್ಟು ನೀರು ಸಿಕ್ಕಿದೆ. ಹೋರಾಟಗಾರರ ಹೋರಾಟಕ್ಕೆ ಸಿಕ್ಕ ಜಯ ಇದು.ಇನ್ನು ಹೋರಾಟಗಾರರು ಹೋರಾಟ ಮಾಡೋದು ಬೇಡ.ಸರಕಾರ ಮುಂದಿನ ಹೋರಾಟ ಮಾಡಬೇಕು.ಹೆಚ್ಚಿನ ನೀರು ಪಡೆಯಲು ಸರಕಾರ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕು.ಟ್ರಬ್ಯುನಲ್ ಮುಂದೆ ಮೇಲ್ಮನವಿ ಸಲ್ಲಿಸಬೇಕು ಎಂದ್ರು.
ವಿದ್ಯುತ್ ಉತ್ಪಾದನೆ,ಕೃಷಿಗೆ ಇನ್ನೂ ಹೆಚ್ಚಿನ ನೀರು ಕೊಡಬೇಕಿತ್ತು.ಕುಡಿಯುವ ನೀರಿಗೆ 7.5 ಟಿಎಂಸಿ ನೀರು ಕೊಡಬೇಕಿತ್ತು.ಆದರೆ ಈಗ ಅವರೂ ದಾರಿಗೆ ಬಂದಿದ್ದಾರೆ.
ಒಮ್ನೆಲೆ ಕೇಳಿದ್ದೆಲ್ಲಾ ಕೊಟ್ಟರೆ ತಮ್ಮ ಅಸ್ತಿತ್ವವೇ ಇರುವುದಿಲ್ಲ ಎಂಬ ಭಾವನೆ ಅವರಿಗೂ ಇರುತ್ತದೆ.ಹಾಗಾಗಿ ಸರ್ಕಾರ ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ಮಾಡಿದ್ರೆ ನಮ್ಮ ಬೇಡಿಕೆ ಈಡೇರಬಹುದು ಎಂದ್ರು.
ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲು ಸಿಎಂ ಗೆ ತಿಳಿಸಿದ್ದೇವೆ.ಪ್ರಕರಣ ಹಿಂಪಡೆಯುವ ಬಗ್ಗೆ ಸಿಎಂ ಕೂಡಾ ಒಪ್ಪಿಗೆ ನೀಡಿದ್ದಾರೆ.ಈ ಬಗ್ಗೆ ಮತ್ತೊಮ್ಮೆ ಸಿಎಂ ಗೆ ತಿಳಿಸುತ್ತೇನೆ.ರೈತರ ಮೇಲಿನ ಪ್ರಕರಣ ಹಿಂಪಡೆಯಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು ಎಂದು ಭರವಸೆ ನೀಡಿದ್ರು.








