ತುಮಕೂರು: ಸಿಮೆಂಟ್ ಲಾರಿ ಮತ್ತು ಕಾರಿನ ನಡುವೆ ಮುಖಮುಖಿ ಡಿಕ್ಕಿಯಾಗಿ ಐದು ಮಂದಿ ಸಾವನ್ನಪ್ಪಿರುವ ಘಟನೆ ಮಧುಗಿರಿ ಸಮೀಪದ ಕೆರೆಗಳಪಾಳ್ಯದ ತಿರುವಿನಲ್ಲಿ ನಡೆದಿದೆ.
ಬೆಂಗಳೂರಿನ ಬೈಯಪ್ಪನಹಳ್ಳಿಯಿಂದ ಪಾವಗಡದಲ್ಲಿದ್ದ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ವೇಳೆ ಮಧುಗಿರಿ ಬಳಿ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಐದು ಜನರು ದುರ್ಮರಣ ಹೊಂದಿದ್ದಾರೆ.
ಮರುಳೀ (20), ಮಂಜುನಾಥ್ (24), ದಿನೇಶ್ (24), ರಾಮ್ ಮೋಹನ್ (23) ಶಿವಪ್ರಸಾದ್ (25) ಮೃತ ದುರ್ದೈವಿಗಳು. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.









