ಪಂಚರಾಜ್ಯ ಚುನಾವಣೆ: ಮುದುಡಿದ ಕಮಲ,ಕೈಹಿಡಿದ ಮತದಾರ,ಪ್ರಾದೇಶಿಕ ಪಕ್ಷಕ್ಕೂ ಸಿಕ್ಕ ಅಧಿಕಾರ

0
10

ಫೋಟೋ ಕೃಪೆ: ಟ್ವಿಟ್ಟರ್

ಬೆಂಗಳೂರು: ಪಂಚರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಮಲ ವಿಲವಿಲ ಎಂದು ಒದ್ದಾಡಿದರೆ ಕೈ ಕಿಲಕಿಲ ಎನ್ನುವ ನಗೆ ಬೀರಿದೆ,ಎರಡು ರಾಜ್ಯದಲ್ಲಿ ಪ್ರಾದೇಶಕ‌ ಪಕ್ಷಗಳು ಅಧಿಕಾರದ ಗದ್ದುಗೆಗೇರಿವೆ.

ಐದು ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದು ಅದನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಬಿಜೆಪಿ ಭದ್ರಕೋಟೆ ಮಧ್ಯಪ್ರದೇಶ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಜಿದ್ದಾಜಿದ್ದಿ ಮುಂದುವರೆದಿದ್ದು ಕಾಂಗ್ರೆಸ್ ಪಕ್ಷಕ್ಕೆ ಸರಕಾರ ರಚಿಸುವ ಅವಕಾಶ ಹೆಚ್ಚಿದೆ.

ರಾಜಸ್ಥಾನದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದ್ದು ಕಾಂಗ್ರೆಸ್ ಸರಳ ಬಹುಮತ ಪಡೆದು ಪಡೆದು ಅಧಿಕಾರಕ್ಕೆ ಬರುತ್ತಿದೆ,ಬಿಜೆಪಿಯ ಆಡಳಿತ ವಿರೋಧಿ ಅಲೆ,ಹಾಲಿ ಸಿಎಂ ವಸುಂಧರಾ ರಾಜೆ ಅವರ ಸರ್ವಾಧಿಕಾರಿ ಧೋರಣೆಯಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ಛತ್ತೀಸ್ ಗಡದಲ್ಲಿ ಮೂರು ಬಾರಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಈ ಬಾರಿ ಮುಗ್ಗರಿಸಿದ್ದು ಇಲ್ಲಿ ಮೊದಲ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಹೊಸ ರಾಜ್ಯವಾಗಿ ಉದಯಸಿದಂದಿನಿಂದ ನಡೆದ ಮೂರು ಚುನಾವಣೆಯಲ್ಲಿ ಬಿಜೆಪಿ ಸತತ ಗೆಲುವು ಸಾಧಿಸಿದ್ದು ನಾಲ್ಕನೇ ಚುನಾವಣೆಯಲ್ಲಿ ಭಾರೀ ಹಿನ್ನಡೆಯೊಂದಿಗೆ ಕೈಗೆ ಶರಣಾಗಿದೆ.

ತೆಲಂಗಾಣದಲ್ಲಿ ಅವಧಿಗೆ ಮುನ್ನವೇ ಚುನಾವಣೆಗೆ ಹೋಗಿದ್ದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.ಕಾಂಗ್ರೆಸ್,ಟಿಡಿಪಿ ಮೈತ್ರಿ ವಿಫಲವಾಗಿದ್ದು,ಬಿಜೆಪಿ ಕೂಡ 1 ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.

ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಗೆಲುವಿನ ನಗೆ ಬೀರಿದ್ದು ಪ್ರಾದೇಶಿಕ ಪಕ್ಷವೇ ಇಲ್ಲಿ ಮುಖ್ಯ ಎನ್ನುವ ಸಂದೇಶ ರಾಷ್ಟ್ರೀಯ ಪಕ್ಷಗಳಿಗೆ ರವಾನಿಸಿದೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಇಲ್ಲಿ ನೆಲ ಕಚ್ಚಿದ್ದು ಕೇವಲ 5 ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.ಬಿಜೆಪಿ ಇಲ್ಲಿ ಖಾತೆ ತೆರೆದಿದ್ದೇ ಸಾಧನೆ,ಮೊದಲ ಬಾರಿ ಕೇಸರಿ ಪಕ್ಷದ ಸದಸ್ಯ ಮಿಜೋರಾಂ ಅಸೆಂಬ್ಲಿ ಪ್ರವೇಶ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೂಡ ಇಲ್ಲಿ ನೆಲ‌ ಕಚ್ಚಿದೆ.

ಪಕ್ಷಗಳ ಬಲಾಬಲ ಒಟ್ಟು ಸ್ಥಾನ:

ಮಧ್ಯಪ್ರದೇಶ:230
ಬಿಜೆಪಿ:108
ಕಾಂಗ್ರೆಸ್:114
ಇತರೆ:8

ರಾಜಸ್ಥಾನ ಒಟ್ಟು ಸ್ಥಾನ:199
ಬಿಜೆಪಿ:74
ಕಾಂಗ್ರೆಸ್:99
ಬಿಎಸ್ಪಿ:6
ಇತರೆ:20

ಛತ್ತೀಸ್ ಗಡ ಒಟ್ಟು ಸ್ಥಾನ:90
ಬಿಜೆಪಿ:17
ಕಾಂಗ್ರೆಸ್:66
ಬಿಎಸ್ಪಿ: 3
ಇತರೆ:4

ತೆಲಂಗಾಣ ಒಟ್ಟು ಸ್ಥಾನ:119
ಟಿ ಆರ್ ಎಸ್:87
ಕಾಂಗ್ರೆಸ್:19
ಟಿಡಿಪಿ:2
ಬಿಜೆಪಿ:1
ಇತರೆ:

ಮಿಜೋರಾಂ ಒಟ್ಟು ಸ್ಥಾನ:40
ಕಾಂಗ್ರೆಸ್: 5
ಎಂಎನ್ಎಫ್:26
ಬಿಜೆಪಿ:1
ಇತರೆ:8

- Call for authors -

LEAVE A REPLY

Please enter your comment!
Please enter your name here