ಬೆಂಗಳೂರು: ಈಗಿನ ಕಾಲದಲ್ಲಿ ಹುಡುಗ್ರು ಅಂದ್ರೆ ಗರ್ಲ್ ಫ್ರೆಂಡ್ ಇರಲ್ವಾ ಅನ್ನೊ ಹಾಗೆ ಆಗಿದೆ. ಆದ್ರೆ, ಒಂದೋ ಎರಡೋ ಗರ್ಲ್ ಫ್ರೆಂಡ್ಸ್ ಇರೋದು ಕಾಮನ್. ಅದೇ 23 ಗರ್ಲ್ ಫ್ರೆಂಡ್ಸ್ ಇದ್ರೆ ಏನ್ ಹೇಳೋದು ಹೇಳಿ.
ಇತ್ತೀಚಿಗೆ ಹುಡುಗಿಯರು ಮದುವೆಯಾಗಲು ಸಾಮಾಜಿಕ ಜಾಲತಾಣಗಳನ್ನ ಬಳಸ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡಿದ್ದ ಸುರೇಶ, ಅಂತಹ ಹುಡುಗಿಯರನ್ನು ಮದಯವೆಯಾಗುವುದಾಗಿ ಹೇಳಿ ನಂಬಿಸಿ ಅವ್ರಿಂದ ಹಣ ಪೀಕುತ್ತಿದ್ದ. ಹೀಗೆ ಇವನಿಂದ ಹಣ ಕಳೆದುಕೊಂಡ ಮಹಿಳೆಯೊಬ್ಬಳು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ಮಹಿಳೆಯ ದೂರಿನ ಹಿನ್ನೆಲೆ ತನಿಖೆ ನಡೆಸಿದ್ದ ಪೊಲೀಸರು ಸುರೇಶನನ್ನ ಬಂಧಿಸಿದ್ದಾರೆ. ಆದ್ರೆ, ಪೊಲೀಸ್ರಿಗೆ ಇವನ ಕುರಿತು ಬಗೆದಷ್ಟೂ ರೋಚಕ ವಿಚಾರಗಳು ಹೊರ ಬರ್ತಾ ಇವೆ ನಾಲ್ವರನ್ನ ಮದುವೆ ಆಗಿರೋ ಸುರೇಶ 20 ಕ್ಕೂ ಹೆಚ್ಚು ಗರ್ಲ್ ಫ್ರೆಂಡ್ಸ್ ಹೊಂದಿದ್ದಾನೆ. ಮೈಸೂರು, ರಾಮನಗರ, ಬೆಂಗಳೂರು ಸೇರಿ ರಾಜ್ಯಾದ್ಯಂತ ಹತ್ತಾರು ಹುಡುಗಿಯರಿಗೆ ಮೋಸ ಮಾಡಿದ್ದಾನೆ.









