ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿದ್ದು. ಇಂದು ಹಳೇ ಮಠಕ್ಕೆ ಅಂಟಿಕೊಂಡಿರುವ ಸಮಾಧಿಯಲ್ಲಿ ಅಂತಿಮ ವಿಧಿ ವಿಧಾನಗಳನ್ನು ನಡೆಸಲಾಯಿತು.
ನಿನ್ನೆ ಬೆಳಗ್ಗೆ 11 ಗಂಟೆ 44 ನಿಮಿಷಕ್ಕೆ ಲಿಂಗೈಕ್ಯರಾದ ದೇವರ ಅಂತಿಮ ದರ್ಶನವನ್ನು ಲಕ್ಷಾಂತರ ಭಕ್ತಾಧಿಗಳು ಮಾಡಿದರು. ಸ್ವಾಮೀಜಿಯವರ ಆಸೆಯಂತೆ ದಾಸೋಹ ನಿಲ್ಲಿಸದ ಮಠದ ಆಡಳಿತ ಮಂಡಳಿ ಅಂತಿಮ ದರ್ಶನಕ್ಕೆ ಬರುವ ಪ್ರತಿಯೊಬ್ಬ ಭಕ್ತನೂ ದಾಸೋಹ ಸ್ವೀಕರಿಸುವ ವ್ಯವಸ್ಥೆ ಮಾಡಿದೆ. ಸುಮಾರು 15 ಕಿ.ಮೀ ದೂರ ಕ್ಯೂನಲ್ಲಿ ನಿಂತು ಭಕ್ತಾಧಿಗಳು ದೇವರ ಅಂತಿಮ ದರ್ಶನ ಪಡೆದರು.
ದೇವರು ಲಿಂಗೈಕ್ಯರಾದ ನಂತರವೂ ಮಠದಲ್ಲಿ ಮಕ್ಕಳು ನಿನ್ನೆ ರಾತ್ರಿ ಮತ್ತು ಇಂದು ಬೆಳಗ್ಗೆ ದುಃಖದ ಮಡಿವಿನಲ್ಲೇ ಪ್ರಾರ್ಥನೆ ಸಲ್ಲಿಸಿದರು. ಮಠದ ಸಾವಿರಾರು ವಿದ್ಯಾರ್ಥಿಗಳು ಅಂತಿಮ ದರ್ಶನ ಪಡೆದಿದ್ದು, ಮಠದಲ್ಲಿ ಶಾಲಾ ಮಕ್ಕಳ ಆಕ್ರಂದನ ಮುಗುಲು ಮುಟ್ಟಿದೆ.
ರಾಜ್ಯ ಸರ್ಕಾರ ಮಠದ ಆಡಳಿತ ಮಂಡಳಿಗೆ ಸಕಲ ಸಹಕಾರವನ್ನು ನೀಡಿದ್ದು, ಎಲ್ಲಿಯೂ ಕಿಂಚಿತ್ತು ಗೊಂದಲಗಳಾಗದಂತೆ ಎಲ್ಲಾ ವಿಧಿ ವಿಧಾನಗಳು ನೆರವೇರಿದವು.
ದೇವರ ಅಗಲಿಕೆ ಕನ್ನಡ ನಾಡಿಗೆ, ದೇಶಕ್ಕೆ ತುಂಬಲಾರದ ನಷ್ಟ. ದೇವರೇ ನೀವು ಮತ್ತೊಮ್ಮೆ ಹುಟ್ಟಿ ಬನ್ನಿ ಎಂಬುದು ಪ್ರತಿಯೊಬ್ಬ ಭಕ್ತನ ಬೇಡಿಕೆಯಾಗಿದೆ.









