ಬೆಂಗಳೂರು:ಭಾರೀ ನಷ್ಟಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ನೀಡುತ್ತಿದ್ದ ರಿಯಾಯಿತಿ ಬಸ್ ಪಾಸ್ ಅನ್ನು ಬಿಎಂಟಿಸಿ ರದ್ದು ಮಾಡಿದೆ.ಆರ್ಥಿಕ ಹೊರೆಯಿಂದ ಕಂಗಾಲಾಗಿರುವ ಬಿಎಂಟಿಸಿಯಿಂದ ನಷ್ಟ ಕಡಿಮೆ ಮಾಡೋ ಯತ್ನದ ಭಾಗವಾಗಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ನೀಡುತ್ತಿದ್ದ ಬಸ್ ಪಾಸ್ ರದ್ದುಪಡಿಸಿದೆ.
ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಾರ್ವಜನಿಕರಿಗೆ ನೀಡುವ ಮಾಸಿಕ ಪಾಸ್ ಗಳನ್ನು ಪಡೆಯುವಂತೆ ನೌಕರರಿಗೆ ಸೂಚನೆ ನೀಡಿದೆ.ಬಿಎಂಟಿಸಿಯಿಂದ ಎಲ್ಲಾ ಸರ್ಕಾರಿ ಇಲಾಖೆಗಳ ಮುಖ್ಯಸ್ಥರಿಗೆ ಈ ಸಂಬಂಧ ಪತ್ರ ರವಾನೆ ಮಾಡಿದ್ದು, ಬಿಎಂಟಿಸಿ ನಿರ್ಧಾರಕ್ಕೆ ರಾಜ್ಯ ಸರ್ಕಾರಿ ನೌಕರರ ವರ್ಗ ತೀವ್ರ ವಿರೋಧ ವ್ಯಕ್ತಪಡಿಸಿದೆ.ಸಕಾರಣಗಳನ್ನು ನೀಡದೇ ರಿಯಾಯಿತಿ ಪಾಸ್ ಗಳನ್ನು ರದ್ದು ಮಾಡಿರೋದಕ್ಕೆ ಅಸಮಧಾನ ವ್ಯಕ್ತಪಡಿಸಿದೆ.









