ಬೆಳಗಾವಿ: ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆ ಹರಿಸಲು ಸರಕಾರ ಬದ್ದವಾಗಿದೆ. ಸಕ್ಕರೆ ಕಾರ್ಖಾನೆ ಯಾರದ್ದೆ ಇದ್ದರು ಅವರಿಂದ ಬಾಕಿ ಉಳಿಸಿಕೊಂಡ ಹಣವನ್ನು ಜಿಲ್ಲಾಧಿಕಾರಿ ಕೊಡಿಸಬೇಕೆಂದು ಸರಕಾರ ಸೂಚಿಸಲಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಬ್ಬಿಗೆ ಬಾಕಿ ಹಣ ನೀಡುವಂತೆ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.
ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದೆ. ಯಾವುದೇ ಕಾರಣಕ್ಕೂ ಸುವರ್ಣ ವಿಧಾನಸೌಧ ಒಳಗಡೆ ಧರಣಿ ಮಾಡುವುದು ಸರಿಯಲ್ಲ ಎಂದರು.
ಸಕ್ಕರೆ ಕಾರ್ಖಾನೆಯ ಮಾಲೀಕರು ಯಾರೇ ಇದ್ದರು.ಅವರಿಂದ ಬಾಕಿ ಹಣ ಕೊಡಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ನಾವು ರೈತ ಮಕ್ಕಳು, ಅಧಿಕಾರಿಗಳು ರೈತ ಮಕ್ಕಳು ಸಿಎಂ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ ಈ ಧರಣಿಯನ್ನು ಕೈ ಬಿಡುವಂತೆ ವಿನಂತಿಸಿಕೊಂಡರು.
ವಿದ್ಯುತ್ ಹಾಗೂ ನೀರಿನ ಬಗ್ಗೆ ಸರಕಾರ ಅಧ್ಯಯನ ಮಾಡುತ್ತಿದ್ದಾರೆ. ಈ ಉದ್ದೇಶದಿಂದ ನಾನು ಬೆಳಗಾವಿಗೆ ಬಂದಿದ್ದೇನೆ. ನ._೧೫ರಿಂದ ರೈತರು ಧರಣಿ ನಡೆಸಿದ್ದಿರಿ. ಈ ಕುರಿತು ಸಿಎಂ ಕುಮಾರಸ್ವಾಮಿ ಸಭೆ ನಡೆಸಿದ್ದಾರೆ. ನಿಮಗೆ ನ್ಯಾಯ ವದಗಿಸಿಕೊಡುವಲ್ಲಿ ಸರಕಾರ ಬದ್ದವಾಗಿದೆ ಎಂದರು.
ಇದಕ್ಕೂ ಮುನ್ನ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದಗೌಡ ಮೊದಗಿ ಮಾತನಾಡಿ, ಸಿಎಂ ಬೆಂಗಳೂರಿನಲ್ಲಿ ನಡೆಸಿದ ಸಭೆಗೆ ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಅವರು ಯಾವುದೇ ಮಾಹಿತಿ ನೀಡಿಲ್ಲ. ಎರಡು ವಾರದ ಹಿಂದೆ ಜಿಲ್ಲಾಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದಿಸಿಲ್ಲ. ಪ್ರತಿಭಟನೆ ನಡೆಸಿದ ರೈತರ ಬಗ್ಗೆ ಡಿಸಿಗೆ ಕಳಕಳಿ ಇಲ್ಲ. ಇವತ್ತು ಬೆಳಗ್ಗೆ ಪೊಲೀಸ್ ಬಂದೋಬಸ್ತ ನೊಂದಿಗೆ ಕಚೇರಿಗೆ ಆಗಮಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದ ಸೌಭಾಗ್ಯ ಸಕ್ಕರೆ ಕಾರ್ಖಾನೆ ನಾಲ್ಕು ವರ್ಷದಿಂದ ಕಬ್ಬಿನ ಬಾಕಿ ನೀಡಿಲ್ಲ. ಡಿಸಿ ಯಾವುದೇ ಬಾಕಿ ಇಲ್ಲ ಎಂದು ಹೇಳುತ್ತಾರೆ. ಇವರಿಗೆ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದರು.
ಸರಕಾರ ಕೊಟ್ಟ ಯೋಜನೆ ವಿಫಲವಾಗಲು ಬೆಳಗಾವಿ ಜಿಲ್ಲಾಡಳಿತ. ಸಕ್ಕರೆ ಕಾರ್ಖಾನೆಯ ಕಪಿಮುಷ್ಟಿಯಲ್ಲಿರುವ ಸರಕಾರ ಹೋರಾಟ ಮಾಡಿದ ರೈತರಿಗೆ ಗೂಂಡಾ ಎಂದಿತ್ತು. ಎಕ್ಸ್ ಪಿಲ್ಡ್ ದರ, ಜಿಲ್ಲಾಡಳಿತದ ವ್ಯವಸ್ಥೆ ಬದಲಾಯಿಸಬೇಕು ಹಾಗೂ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು. ಸಚಿವ ಡಿ.ಕೆ.ಶಿವಕುಮಾರ ಮಾತಿಗೆ ಸಮ್ಮತಿ ಸೂಚಿಸಿದ ರೈತರು ಧರಣಿಯನ್ನು ಹಿಂಪಡೆದರು.









