ಹೇರಾಮ್ ಎನ್ನೋಣ ಬನ್ನಿ……

0
20

ಇವತ್ತು ಸಾಮಾನ್ಯವಾಗಿ ನಮಗೆಲ್ಲ ರಾಮ ಅಂದ ತಕ್ಷಣ ನೆನಪಾಗೋದು ಸೀತೆಯ ಪತಿ ರಾಮ. ಆ ರಾಮನನ್ನ ನಾವು ಕೇವಲ ದೈವ ಸ್ವರೂಪಿಯಾಗಿಯೇ ನೋಡುತ್ತ ಬಂದಿದ್ದೇವೆ. ಆದರೆ ರಾಮ ಎನ್ನುವುದರ ನಿಜವಾದ ಅರ್ಥ ಏನಿರಬಹುದು ಎನ್ನುವುದರ ಹುಡುಕಾಟಕ್ಕೆ ಬಹುಶಃ ನಾವು ಯಾರು ತಲೆಹಾಕಿರುವುದಿಲ್ಲ. ಇಲ್ಲಿ ರಾಮ ಎಂದರೆ ಅವನೊಬ್ಬ ಸಾಮಾನ್ಯ ಮನುಷ್ಯ ಎನ್ನುವುದು ನಮ್ಮ ಜನಪದ ಸಾಹಿತ್ಯದಿಂದ ತಿಳಿದುಬರುತ್ತದೆ. ಜೊತೆಗೆ ರಾಮ ಎನ್ನುವುದು ಒಂದು ಜಪಿತವಾದ ಪದ.

ಈ ವುಚಾರವಾಗಿ ನಿನ್ನೆ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಗ್ರಾಮ‌ ಸೇವಾ ಸಂಘ ಆಯೋಜಿಸಿದ್ದ ಹೇ ರಾಮ್ ಎನ್ನೋಣ ಬನ್ನಿ ಎಂಬ ಬಹು ಭಾಷ ಸಾಂಸ್ಕೃತಿಕ ಸಂಜೆ ಈ ಕಾರ್ಯಕ್ರಮ ಸಾಹಿತ್ಯದ ವಿವಿಧ ಮಜಲುಗಳನ್ನ ವೇದಿಕೆ ಮೇಲೆ ಅನಾವರಣಗೊಳಿಸಿತ್ತು. ಇಲ್ಲಿ ಹೆಸರಾಂತ ಗಾಯಕರಾದ ವಾಸು ದೀಕ್ಷಿತ್ ಹಾಗೂ ಬಿಂದು ಮಾಲಿನಿ ಇವರು ರಘುಪತಿ ರಾಘವ ರಾಜರಾಮ್ ಹಾಡು ಹಾಡುವ ಮೂಲಕ ಈ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಿ ಮತ್ತೊಬ್ಬ ಜನಪದ ಗಾಯಕ ಜನ್ನಿ ಅವರ ಜನಪದ ಹಾಡಿನೊಂದಿಗೆ ಈ ಕಾರ್ಯಕ್ರಮ ಅಂತ್ಯವಾಯಿತು.

ಇಲ್ಲಿ ಕನ್ನಡ ಸಾಹಿತ್ಯದ ಬಹುಮಖಗಳಾದ ಕವನ, ಕವಿತೆ, ಸಿನಿಮಾ, ಹಾಡು, ಜೊತೆಗೆ ಒಂದಷ್ಟು ಸಾಹಿತ್ಯದಾಯಕ ಮಾತುಗಾರಿಕೆಗಳು ಕೇಳುಗರನ್ನ ಹಿಡಿದಿಟ್ಟುಕೊಳ್ಳುವಂತೆ ಮಾಡಿದ್ದವು.

ಮುಖ್ಯವಾಗಿ ಹೇ ರಾಮ್ ಎನ್ನೋಣ ಬನ್ನಿ ಎನ್ನುವುದು ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಷ್ಟೇ ಅಲ್ಲ ಅದೊಂದು ರೀತಿಯ ಚಳುವಳಿ ಎನ್ನುವುದು ಮತ್ತೊಂದು ವಿಶೇಷ. ಹಾಗಾಗಿ ಇಲ್ಲಿ ಪ್ರೊ.ರಹಮತ್ ತರಿಕೆರೆ, ಮೈಸೂರು ರಾಜೇಂದ್ರ ಚನ್ನಿ, ವನಮಲ ವಿಶ್ವನಾಥ್, ವಿಜಯಮ್ಮ, ಶಿವಸ್ವಾಮಿ, ಶಿಲ್ಪ ಇವರೇ ಮೊದಲಾದವರು ಕನ್ನಡ ಸಾಹಿತ್ಯದ ಬಹುಮುಖಗಳಿಗೆ ವೇದಿಕೆ ಮೇಲೆ ಜೀವತುಂಬಿದರು.

ಈ ಕಾರ್ಯಕ್ರಮದಲ್ಲಿ ನೂರಾರು ಜನ ಸಾಹಿತ್ಯಾಸಕ್ತರು, ಕಲಾವಿದರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಈ ಕಾರ್ಯಕ್ರಮದ ಮುಖ್ಯ ರುವಾರಿಗಳು ಹಾಗೂ ಆಯೋಜಕರಾಗಿ ಕೈ ಉತ್ಪನ್ನಗಳ ಹೋರಾಟಗಾರ ಪ್ರಸನ್ನ ಹೆಗ್ಗೂಡು ಇವರು ಕಾರ್ಯಕ್ರಮವನ್ನ ನಡೆಸಿಕೊಟ್ಟರು.

- Call for authors -

LEAVE A REPLY

Please enter your comment!
Please enter your name here