ಕೂದಲು ಮತ್ತು ತ್ವಚೆಯ ಸೌಂದರ್ಯಕ್ಕಾಗಿ ನಾನಾ ಕಸರತ್ತುಗಳನ್ನು ಮಾಡುತ್ತೇವೆ. ವಾರಕ್ಕೊಂದು ಬಗೆಯ ಶಾಂಪೂ, ಸೋಪುಗಳನ್ನು ನಮ್ಮ ಮೇಲೆ ನಾವು ಪ್ರಯೋಗಿಸಿಕೊಳ್ಳೆತ್ತೇವೆ. ಆದ್ರೆ ಕೊನೆಗೆ ನಮಗೆ ಸಿಗುವುದು ಕಾಂತಿ ಹೀನ ತ್ವಚೆ ಮತ್ತು ಕೂದಲು.
ನಮ್ಮ ತ್ವಚೆಯ ಮತ್ತು ಕೂದಲಿನ ಹಾರೈಕೆಗೆ ಆದಷ್ಟು ನೈಸರ್ಗಿಕ ವಿಧಾನಗಳನ್ನು ಬಳಸುವುದು ಒಳ್ಳೆಯದು. ಹಾಗಾದ್ರೆ ಯಾವ ರೀತಿ ನೈಸರ್ಗಿಕವಾಗಿ ನಮ್ಮ ತ್ವಚೆ ಕಾಪಾಡಿಕೊಳ್ಳಬಹುದು ಅಂತಾ ಯೋಚಿಸುತ್ತಿದ್ದೀರಾ ಅದಕ್ಕೆ ಉತ್ತರ ನಾವು ನೀಡುತ್ತೇವೆ.
ಸ್ನಾನಕ್ಕಾಗಿ ಚೂರ್ಣ
ಬೇಕಾಗುವ ಪದಾರ್ಥಗಳು
* ಬಿಲ್ವಪತ್ರೆ
* ಬೇವಿನ ಎಲೆ
* ಶೀಗೆಪುಡಿ
* ಕಡಲೇಹಿಟ್ಟು
ಬಿಲ್ವಪತ್ರೆ, ಬೇವಿನ ಎಲೆ, ಶೀಗೆಪುಡಿ
ಇವುಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ನುಣ್ಣಗೆ ಪುಡಿ ಮಾಡಿ ಇದಕ್ಕೆ ಸ್ವಲ್ಪ ಕಡಲೇಹಿಟ್ಟನ್ನು ಸೇರಿಸಿ ಒಂದು ಚೂರ್ಣ ತಯಾರಿಸಿ ಈ ಚೂರ್ಣವನ್ನು ಪ್ರತಿದಿನ ಸ್ನಾನಕ್ಕೆ ಬಳಸುವುದರಿಂದ ಕೂದಲು ಮತ್ತು ದೇಹ ಕಾಂತಿಯುತವಾಗುತ್ತದೆ.









