ರಾಮನಗರ: ಕೆಆರ್ಎಸ್ ನಿಂದ ರಾಮನಗರಕ್ಕೆ ಹೋಗುವ ಮಾರ್ಗ ಮದ್ಯದಲ್ಲಿ ಹೂ ಮಾರುತ್ತಿದ್ದ ಪುಟ್ಟ ಬಾಲಕಿಯನ್ನ ನೋಡಿದ ಸಿಎಂ ಕುಮಾರಸ್ವಾಮಿ ಕಾರು ನಿಲ್ಲಿಸಿ ಮಾತನಾಡಿಸಿ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದರು.
ರಾಮನಗರ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೆರಳುತ್ತಿದ್ದರು. ಈ ವೇಳೆ ಕೆ .ಆರ್ .ಸ್ ನಿಂದ ರಾಮನಗರಕ್ಕೆ ಹೋಗುವ ಮಾರ್ಗ ಮದ್ಯದಲ್ಲಿ ಬೆಳಗೊಳ ಗ್ರಾಮದಲ್ಲಿ ರಸ್ತೆ ಬದಿ ಹೂವು ಮಾರುತ್ತ ನಿಂತಿದ್ದ ಶಾಬಾಬ್ತಾಜ್ ಎಂಬ ಪುಟ್ಟ ಬಾಲಕಿಯನ್ನು ಕಾರು ನಿಲ್ಲಿಸಿ ಮಾತನಾಡಿಸಿದರು.
ಇದೇ ವೇಳೆ ಬಾಲಕಿಯ ತಂದೆ ತಮ್ಮನ್ನು ಕಾಣುವಂತೆ ತಿಳಿಸಿದರು. ಅಲ್ಲದೆ, ವಿದ್ಯಾಭ್ಯಾಸಕ್ಕೆ ಸಹಾಯಮಾಡುವುದಾಗಿ ತಿಳಿಸಿದರು.









