ಬೆಂಗಳೂರು: ವಂಚನೆ, ಜೀವ ಬೆದರಿಕೆ ಸಂಬಂಧಪಟ್ಟಂತೆ ಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ವಿರುದ್ಧ ತನಿಖೆ ಮುಂದುವರಿಸುವಂತೆ ಹೈಕೋರ್ಟ್ ನೀಡಿರುವ ನಿರ್ದೇಶನಕ್ಕೆ ಪಕ್ಷ ತಲೆಬಾಗುತ್ತದೆ ಎಂದು ಎಂಇಪಿ ರಾಜ್ಯ ವಕ್ತಾರ ಸಿರಾಜ್ ಜಫ್ರಿ ಸ್ಪಷ್ಟಪಡಿಸಿದ್ದಾರೆ.
ತನಖೆ ಮೂಲಕವಾದರು ಎಂಇಪಿ ಮತ್ತು ನೌಹೀರಾ ಶೇಕ್ ವಿರುದ್ಧ ಕೆಲವರು ಮಾಡುತ್ತಿರುವ ಆರೋಪ, ಅಪಪ್ರಚಾರಕ್ಕೆ ತೆರೆ ಬೀಳುವಂತಾಗಲಿ ಎಂಬ ಸದಾಶಯ ನಮ್ಮದು.ಬಿ ಫಾಂ ನೀಡುವಾಗ ಪಕ್ಷ ಹಾಗೂ ಪಕ್ಷದ ಅಭ್ಯರ್ಧಿಗಳಿಗೆ ಹಾನಿಯಾಗದಿರಲಿ ಎಂಬ ಕಾರಣಕ್ಕಾಗಿ ಕೆಲ ಅಭ್ಯರ್ಥಿಗಳಿಂದ ಚೆಕ್ ಪಡೆದಿದ್ದು, ಅವುಗಳನ್ನು ಚುನಾವಣೆ ನಂತರ ಅವರಿಗೆ ಗೌರವಯುತವಾಗಿ ವಾಪಸ್ ಕೊಡಲಾಗಿದೆ.ಆದರೆ ಕೆಲವು ಅಭ್ಯರ್ಥಿಗಳು ಚೆಕ್ ವಾಪಾಸ್ ಪಡೆಯದೆ ಜತೆಗೆ 28 ಲಕ್ಷ ಚುನಾವಣಾ ವೆಚ್ಚ ಕೊಡಬೇಕೆಂದು ಒತ್ತಾಯ ಮಾಡಿ, ರಾಜ್ಯ ಕಚೇರಿಗೆ ಬಂದು ಗಲಭೆ, ದಾಂಧಲೆ ಮಾಡಿ, ಕಚೇರಿಯನ್ನು ಅಕ್ರಮವಾಗಿ ವಶಕ್ಕೆ ತೆಗೆದುಕೊಂಡು ಧರಣಿ, ಪ್ರತಿಭಟನೆ ಮೂಲಕ ಪಕ್ಷ ಮತ್ತು ನೌಹೀರಾ ಶೇಕ್ ಮಸೀ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಈಗ ರಾಜ್ಯ ಹೈಕೋರ್ಟ್ ವಂಚನೆ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖೆ ಮುಂದುವರಿಸುವಂತೆ ಜೀವನ್ ಭೀಮಾನನಗರದ ಪೋಲಿಸರಿಗೆ ಆದೇಶ ಮಾಡಿರುವುದನ್ನು ನಮ್ಮ ಪಕ್ಷ ಸ್ವಾಗತಿಸುತ್ತದೆ. ಜತೆಗೆ ತನಿಖೆಗೆ ಪಕ್ಷ ಎಲ್ಲ ರೀತಿಯ ಸಹಕಾರ ನೀಡಲಿದೆ ಈ ಮೂಲಕವಾದರು ನಾಡಿನ ಜನತೆಗೆ ಸತ್ಯ ಸಂಗತಿ ಏನು ಎಂಬುದು ಗೊತ್ತಾಗಲಿದೆ.ಎಲ್ಲ ಕ್ಕಿಂತ ಮಿಗಿಲಾಗಿ ಧ್ವನಿ ಇಲ್ಲದವರು ರಾಜಕೀವಾಗಿ ಶಕ್ತಿವಂತರಾಗಬೇಕು, ರಾಜಕೀಯ ಅಧಿಕಾರ ಪಡೆದುಕೊಳ್ಳಬೇಕು, ಮಾನವೀಯತೆಗೆ ಎಂದು ಸೋಲಾಗಬಾರದು, ಅನ್ಯಾಯವಾಗಬಾರದು ಎಂಬುದೆ ಪಕ್ಷದ ನೈಜ ಕಾಳಜಿ, ಸಿದ್ದಾಂತ, ಧ್ಯೇಯ, ಗುರಿಯಾಗಿದೆ.
ಬಿಸಿಯೂಟ ಪ್ರಕರಣದಲ್ಲಿ ಹೊರ ರಾಜ್ಯದವರಾಗಿದ್ದರು ಬಡವರ ಬಗ್ಗೆ ನೌಹೀರಾ ಶೇಕ್ ಹೊಂದಿರುವ ಕಾಳಜಿ, ಕಳಕಳಿಯನ್ನು ಅನುಮಾನದಿಂದ ನೋಡಬೇಕಿಲ್ಲ ಎಂದು ರಾಜ್ಯ ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಎಂಬುದನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇವೆ. ಕೊನೆಯದಾಗಿ ಸತ್ಯ ಹೊರಬರಲಿ ಪಕ್ಷದ ವಿರುದ್ಧ ಕೇಳಿ ಬರುತ್ತಿರುವ ಅಪಪ್ರಚಾರ ಕೊನೆಯಾಗಲಿ ಪೊಲೀಸರು ಬೇಗ ತನಿಖೆ ಮುಗಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿ ಆ ಮೂಲಕ ವಾಸ್ತವ ಸಂಗತಿ ಕೋರ್ಟ್ ಮೂಲಕವೇ ಬಹಿರಂಗವಾಗಲಿ ಎಂದು ಪತ್ರಿಕಾ ಹೇಳಿಕೆ ಮೂಲಕ ತನಖೆ ಬಗ್ಗೆ ಪಕ್ಷದ ನಿಲುವನ್ನು ವ್ಯಕ್ತಪಡಿಸಿದ್ದಾರೆ.









