ಬೆಂಗಳೂರು: ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಕಾಲ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕರೂ ಮೊದಲ ದಿನದ ಗಳಿಕೆಯಲ್ಲಿ ಕಬಾಲಿಯನ್ನು ಹಿಂದಿಕ್ಕುವಲ್ಲಿ ವಿಫಲವಾಗಿದೆ.
ಯಸ್,ರಜನಿಕಾಂತ್ ಅಭಿನಯದ ‘ಕಾಲಾ’ ಕನ್ನಡಿಗರ ತೀವ್ರ ವಿರೋಧದ ನಡುವೆಯೂ ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ತೆರೆ ಕಂಡಿದೆ. ಬಿಡುಗಡೆಯ ಮುನ್ನ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರ, ಬಾಕ್ಸ್ ಅಫೀಸ್ನಲ್ಲಿಯೂ ಒಳ್ಳೆಯ ಓಪನಿಂಗ್ ಪಡೆದುಕೊಂಡೂ, ಕಬಾಲಿ ಚಿತ್ರದ ಗಳಿಕೆಯನ್ನು ದಾಟುವ ಗುರಿ ತಲುಪುವಲ್ಲಿ ಮೊದಲ ದಿನ ಎಡವಿದೆ.
ತಮಿಳುನಾಡಿನಲ್ಲಿ ಉತ್ತನ ಗಳಿಕೆ ಮಾಡಿತಾದರೂ
ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಕೇವಲ 7 ಕೋಟಿ ರೂ.ಗಳನ್ನು ಮಾತ್ರ ಗಳಿಸಿದೆ. ಕಬಾಲಿ ಚಿತ್ರ ಮೊದಲದಿನ ಈ ಎರಡು ರಾಜ್ಯದಲ್ಲಿ ಒಟ್ಟು 12.40 ಕೋಟಿ ರೂ. ಗಳಿಸಿಕೊಂಡಿತ್ತು.ಈ ಗಳಿಕೆಯನ್ನೂ ಮೀರಲಿದೆ ಎನ್ನುವ ನಿರೀಕ್ಷೆಯನ್ನು ಕಾಲಾ ಹುಟ್ಟು ಹಾಕಿತ್ತು,ಆದರೆ ಮೊದಲ ದಿನದ ಗಳಿಕೆಯಲ್ಲಿ ಗುರಿ ಮುಟ್ಟುವಲ್ಲಿ ವಿಫಲವಾಗಿದೆ.
ಇನ್ನು ಇಡೀ ದೇಶದಲ್ಲಿ ಕಾಲಾ ಚಿತ್ರದ ಮೊದಲ ಕಲೆಕ್ಷನ್ 25.6 ಕೋಟಿ ರೂ. ಆಗಿದೆ. ಆಸ್ಟ್ರೇಲಿಯಾ ಹಾಗೂ ಯುಎಸ್ನಲ್ಲಿ ಕಾಲಾ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಬಿಡುಗಡೆಯಾದ ಎರಡು ದಿನಗಳಲ್ಲಿ ಈ ಚಿತ್ರ ಯುಎಸ್ನಲ್ಲಿ 6.83 ಕೋಟಿ ಹಾಗೂ ಆಸ್ಟ್ರೇಲಿಯಾದಲ್ಲಿ 1.6 ಕೋಟಿ ರೂ. ಗಳಿಸಿದೆ.
ರಜನಿ ಅಭಿಮಾನಿಗಳಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಕರ್ನಾಟಕದಲ್ಲೂ ಸಿನಿಮಾ ಪ್ರದರ್ಶನ ಆರಂಭಗೊಂಡಿದೆ,ಈಗಾಗಿ ಚಿತ್ರದ ಒಟ್ಟಾರೆ ಗಳಿಕೆಯಲ್ಲಿ ಕಬಾಲಿಯನ್ನು ಹಿಂದಿಕ್ಕುವ ನಿರೀಕ್ಷೆ ಕಾಲಾ ಚಿತ್ರ ತಂಡದ್ದಾಗಿದೆ.









