ಸೋಮನಾಥ: ಕಾಂಗ್ರೆಸ್ ಶಾಸಕ ಆನಂದಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಕಂಪ್ಲಿ ಶಾಸಕ ಗಣೇಶ್ ಕೊನೆಗೂ ಬಂಧಿಸಲ್ಪಟ್ಟಿದ್ದಾರೆ.ಖಚಿತ ಮಾಹಿತಿ ಮೇರೆಗೆ ಗುಜರಾತ್ ಗೆ ತೆರಳಿದ ಬಿಡದಿ ಪೊಲೀಸರು ಗಣೇಶ್ ರನ್ನು ವಶಕ್ಕೆ ಪಡೆದಿದ್ದಾರೆ.
ಜನವರಿ 19 ರಂದು ಬಿಡದಿಯ ಈಗಲ್ ಟನ್ ರೆಸಾರ್ಡ್ ನಲ್ಲಿ ನಡೆದಿದ್ದ ಆನಂದಸಿಂಗ್ ಮೇಲಿನ ಹಲ್ಲೆ ಕೊಲೆ ಯತ್ನ ಪ್ರಕರಣದಲ್ಲಿ ವಾಟೆಂಡ್ ಆಗಿದ್ದ ಗಣೇಶ್ ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದು, ಬಿಡದಿ ಸಬ್ ಇನ್ಸ್ ಪೆಕ್ಟರ್ ಹರೀಶ್ ನೇತೃತ್ವದಲ್ಲಿ ಇಂದು ಬಂಧಿಸಲಾಗಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಗಣೇಶ್ ನಂತರ ಅರ್ಜಿ ವಾಪಸ್ ಪಡೆದಿದ್ದರು ಅದರ ನಡುವೆಯೇ ಗುಜರಾತ್ ನ ಸೋಮನಾಥದಲ್ಲಿ ಗಣೇಶ್ ಬಂಧನವಾಗಿದ್ದು, ರಾತ್ರಿ ವೇಳೆಗೆ ಗಣೇಶ್ ರನ್ನು ರಾಮನಗರಕ್ಕೆ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾತ್ರಿಯೇ ನ್ಯಾಯಧೀಶರ ಮುಂದೆ ಹಾಜರು ಪಡಿಸಲಿರುವ ಪೊಲೀಸರು ನಂತರ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಸರೆ.
ಕೊಲೆ ಯತ್ನ ಆರೋಪಿಯಾಗಿರುವ ಹಿನ್ನಲೆಯಲ್ಲಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕು, ಆರೋಪಿಯನ್ನು ಕರೆದೊಯ್ದು ಮಹಜರ್ ನಡೆಸಬೇಕು ಈಗಲ್ ಟನ್ ರೇಸಾರ್ಟ್ ನಲ್ಲಿ ಮಹಜರ್ ನಡೆಸಬೇಕು ಈ ಹಿನ್ನಲೆ ಕನಿಷ್ಟ 3 ದಿನ ಪೊಲೀಸರ ವಶಕ್ಕೆ ನೀಡುವಂತೆ ಪೊಲೀಸರು ಕೇಳಲಿದ್ದಾರೆ.









