ಬೆಂಗಳೂರು: ಟಿಪ್ಪು ಸುಲ್ತಾನ್ ಒಬ್ಬ ಮತಾಂಧ, ಕೊಲೆಗಡುಕ ಎಂದು ನಾನು ನೇರವಾಗಿ ಅಪಾದನೆ ಮಾಡುತ್ತೇನೆ. ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೆ ರಾಜ್ಯ ಮತ್ತೊಮ್ಮೆ ಹೊತ್ತಿ ಉರಿಯಲು ಕಾರಣವಾಗುತ್ತದೆ ಯಾವುದೇ ಕಾರಣಕ್ಕೂ ಹಜ್ ಭವನಕ್ಕೆ ಟಿಪ್ಪು ಹೆಸರಿಡ ಬಾರದು ಎಂದು ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಜಿ.ಬೋಪಯ್ಯ, ಬಿಜೆಪಿ ಸರ್ಕಾರ ಇದ್ದಾಗ ಹಜ್ ಯಾತ್ರಿಕರಿಗೆ ಅನುಕೂಲವಾಗಲಿ ಎಂದು ಹಜ್ ಭವನಕ್ಕೆ ಹಣ ಕೊಟ್ಟಿದ್ದೇ ಹೊರತು ಟಿಪ್ಪು ಹೆಸರು ಇಡಲು ಅಲ್ಲ ಎಂದು ತಿರುಗೇಟು ನೀಡಿದರು.
ಕೊಡಗು ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ದೇವಸ್ಥಾನ ಹಾಳು ಮಾಡಿ, 80 ಸಾವಿರಕ್ಕೂ ಹೆಚ್ಚು ಜನರನ್ನು ಕೊಲೆ ಮಾಡಿದ್ದಾನೆ ಕೊಡಗು ಜಿಲ್ಲೆಯ ಜನ ಇವತ್ತಿಗೂ ಟಿಪ್ಪು ಕೊಲೆಗಡುಕ ಅಂತಾ ಹೇಳುತ್ತಾರೆ ಸರ್ಕಾರ ಇದನ್ನು ಮೀರಿ ಟಿಪ್ಪು ಹೆಸರಿಡುವ ನಿರ್ಧಾರ ಮಾಡಿದರೆ ಕೊಡಗು ಜಿಲ್ಲೆಯಲ್ಲಿ ತೀವ್ರ ಹೋರಾಟ ಮಾಡುತ್ತೇವೆ ರಾಜ್ಯ ಮತ್ತೊಮ್ಮೆ ಹೊತ್ತಿ ಉರಿಯಲು ಇದು ಕಾರಣವಾಗುತ್ತದೆ ಎಂದರು.









