ಖರ್ಗೆಗೆ ಸಿಎಂ ಇರಲಿ ಡಿಸಿಎಂ ಪಟ್ಟವೂ ಸಿಗ್ಲಿಲ್ಲ,ನಂಗೆ ಪ್ರಮೋಷನ್ನೂ ಇಲ್ಲ ಅಂದಿದ್ದು ಯಾರು‌ ಗೊತ್ತಾ?

0
27

ಬೆಂಗಳೂರು: ನನ್ನ ಪರಿಸ್ಥಿತಿ ಕೂಡ ದಲಿತ ನೌಕರರ ರೀತಿಯೇ ಆಗಿದೆ.ಇನ್ನೂ ಪ್ರಮೋಷನ್ ಆಗಿಲ್ಲ.ನಿಮಗಾದ್ರೆ ಕಾನೂನಿದೆ, ನನಗೆ ಯಾವುದಿದೆ ಎಂದು ಮುಖ್ಯಮಂತ್ರಿ ಒದವಿ ಸಿಗದ ಬಗ್ಗೆ ಡಿಸಿಎಂ‌ ಡಾ.ಜಿ ಪರಮೇಶ್ವರ್ ತಮ್ಮ ಸಾತ್ವಿಕ ಸಿಟ್ಟು ಹೊರ ಹಾಕಿದ್ರು.

ಎಸ್ಸಿ ಎಸ್ಟಿ ಎಂಎಲ್.ಎ, ಎಂಎಲ್‌ಸಿ, ಎಂ.ಪಿ, ರಾಜ್ಯ ಸಭಾ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಪರಮೇಶ್ವರ್, ತೊಂದರೆ ಆದಾಗ ಅಂಬೇಡ್ಕರ್ ನೆನಪಿಸಿಕೊಂಡಿದ್ದೀರಿ. ಸ್ವಲ್ಪ‌ ತಡವಾಗಿ ನೆನಪಿಸಿಕೊಂಡಿದ್ದೀರಿ.ಮೊದಲೇ‌ ಹೆಚ್ಚು ಒಗ್ಗಟ್ಟಾಗಿದ್ದರೆ ಯಾವೋನೂ ಹೀಗೆ ಮುಟ್ಟುತ್ತಿರಲಿಲ್ಲ.ದಲಿತ ಮುಖ್ಯಮಂತ್ರಿ ಅಂತಾರೆಯೇ ಹೊರತು‌ ನಮ್ಮನ್ನೂ ಮುಖ್ಯಮಂತ್ರಿ ಅನ್ನೋದಿಲ್ಲ.ಈಗ ದಲಿತ ಉಪಮುಖ್ಯಮಂತ್ರಿ ಅಂತಿದ್ದಾರೆ.ಬಸವಲಿಂಗಯ್ಯನವರಿಗೆ, ರಂಗನಾಥ್ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಗಲಿಲ್ಲ.ಮಲ್ಲಿಕಾರ್ಜುನ ಖರ್ಗೆ ನಾನು ‌ಕಂಡ ಅಪ್ರತಿಮ ನಾಯಕ.ನಾನು ವಿದ್ಯಾರ್ಥಿ ದೆಸೆಯಿಂದಲೂ ಖರ್ಗೆಯನ್ನ ನೋಡಿದ್ದೇನೆ.ಅಂಥ ಧೀಮಂತ ‌ಖರ್ಗೆ ಅವರು ಡಿಸಿಎಂ ಕೂಡ ಆಗಲಿಲ್ಲ.ಯಾರು ಮಾಡಿದ ಪುಣ್ಯವೂ ಇಂದು ನಾನು ಡಿಸಿಎಂ ಆಗಿದ್ದೇನೆ ಎಂದ್ರು.

ಭಡ್ತಿ ಮೀಸಲಾತಿ ವಿಚಾರದಲ್ಲಿ ಯಾವುದೇ ಡಿಕ್ರಿ, ಆದೇಶ ಹೊರಡಿಸಲು ಆಗೋದಿಲ್ಲ.‌ ಬಿಲ್ ನಲ್ಲಿಯೇ ನ್ಯಾಯಾಲಯ ಮಧ್ಯ ಬರುವಂತಿಲ್ಲ‌ ಎಂದು ಸ್ಪಷ್ಟವಾಗಿ ಹೇಳಲಾಗಿದೆ.ಶೀಘ್ರದಲ್ಲೇ ನಾನು ಭಡ್ತಿ ಮೀಸಲಾತಿ ಬಗ್ಗೆ ಅಧಿಕಾರಿಗಳ ಸಭೆ ಕರೆಯುತ್ತೇನೆ. ಸೂಕ್ತ ನಿರ್ಧಾರ ಕೈಗೊಳ್ತೀನಿ.ರಾಷ್ಟ್ರಪತಿಗಳ ಸಹಿ ಆದ್ರೂ ಅದು ಜಾರಿಗೆ ಬರ್ತಿಲ್ಲ.ಯಾವುದೇ ಕಾರಣಕ್ಕೂ ಹಿಂಬಡ್ತಿ ಆಗೋದಕ್ಕೆ ಬಿಡೊಲ್ಲ.ಸುಪ್ರೀಂ ಕೋರ್ಟ್ ಆದೇಶ ಆದಷ್ಟು ಬೇಗ ಪಾಲಿಸಬೇಕಿದೆ.ಗೆಜೆಟ್ ನೋಟಿಫಿಕೇಷನ್ ಮಾಡಬೇಕಿದೆ.
ನಾವು ಎಂದೂ ಇಂಥ ವಿಚಾರದಲ್ಲಿ ಎದೆಗುಂದುವುದಿಲ್ಲ.
ದಲಿತ ನೌಕರರು ಯಾರೂ ಎದೆಗುಂದುವುದು ಬೇಡ ಎಂದು ಅಭಯ ನೀಡಿದ್ರು.

ಹಳ್ಳಿಗಾಡಿನಲ್ಲಿ ಪರಿಶಿಷ್ಟ ಜಾತಿ, ವರ್ಗದ ಪರಿಸ್ಥಿತಿ ಕಷ್ಟ ಇದೆ.
ಇಂದಿಗೂ ದಲಿತರಿಗೆ ದೇವಸ್ಥಾನಗಳಿಗೆ ಸೇರಿಸೊಲ್ಲ. ನಮ್ಮ ಸರ್ಕಾರದಲ್ಲಿರುವ ನಾವೂ ಬಹಳ ಬುದ್ದಿವಂತರು.ಎಸ್ಸಿ, ಎಸ್ಟಿ ಸಮುದಾಯದವರಿಗೆ ವಸತಿ ಸಮುಚ್ಚಯ ಮಾಡಿದ್ರೂ ಊರ ಹೊರಗೆ ಮಾಡ್ತೀವಿ.ಆದ್ದರಿಂದ ಮೊದಲು ನಮ್ಮ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಬೇಕು.ನಮ್ಮ ಮಕ್ಕಳನ್ನು ಐಎಎಸ್, ಐಪಿಎಸ್ ಮಾಡಬೇಕು.ಆ ಮೂಲಕ ಆಡಳಿತ ಯಂತ್ರದ ಚುಕ್ಕಾಣಿ ಹಿಡಿಯುವ ಕೆಲಸ‌ಮಾಡಬೇಕು ಎಂದ್ರು.

- Call for authors -

LEAVE A REPLY

Please enter your comment!
Please enter your name here