ಬೆಂಗಳೂರು: ಕೊಡಗಿನ ನೆರೆ ಸಂತ್ರಸ್ತರಿಗೆ ನೆರವು ನೀಡಲು 20 ಟ್ರಕ್ ಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ರಾಜ್ಯ ಬಿಜೆಪಿಯಿಂದ ನಾಳೆ ರವಾನಿಸುತ್ತಿದ್ದು ಶಾಸಕರು ಪಾಲಿಕೆ ಸದಸ್ಯರು 2 ತಿಂಗಳ ವೇತನವನ್ನ ನೆರವಿಗೆ ನೀಡುವ ನಿರ್ಧಾರವನ್ನು ಕೈಗೊಂಡಿದೆ.
ಕೊಡಗಿನಲ್ಲಿ ಮಳೆ ಅನಾಹುತ ಹಿನ್ನಲೆಯಲ್ಲಿ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲಾಯಿತು.ಮಾಜಿ ಡಿಸಿಎಂ ಆರ್ ಅಶೋಕ್ ನೇತೃತ್ವದಲ್ಲಿ ಬಿಬಿಎಂಪಿ ಸದಸ್ಯರ ಸಭೆ ನಡೆದಿದ್ದು ಮಳೆಯಿಂದ ಅನಾಹುತವಾದ ಕೊಡಗಿಗೆ ಯಾವ ರೀತಿ ಸಹಾಯ ಮಾಡಬಹುದೆಂಬ ಬಗ್ಗೆ ಚರ್ಚೆ ನಡೆಸಲಾಯಿತು.
ಬೆಂಗಳೂರಿನ ಬಿಜೆಪಿ ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಎರಡು ತಿಂಗಳ ವೇತನವನ್ನು ನೆರೆ ಪರಿಹಾರಕ್ಕಾಗಿ ನೀಡಲು ನಿರ್ಧರಿಸಿದ್ದು ಇತರ ಪದಾಧಿಕಾರಿಗಳು ಕನಿಷ್ಠ 10ಸಾವಿರ ರೂ. ನೀಡುವಂತೆ ಆರ್. ಅಶೋಕ್ ಅವರು ಸಭೆಯಲ್ಲಿ ಮನವಿ ಮಾಡಿದರು.
ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಡಿಸಿಎಂ ಆರ್ ಅಶೋಕ್, ಬೆಂಗಳೂರಿನ ನಾವು ಕಾವೇರಿ ನೀರು ಕುಡಿಯುತ್ತೇವೆ ದೇಶಕ್ಕ ಹೆಚ್ಚು ಸೈನಿಕರನ್ನ ಕೊಟ್ಟ ನಾಡು ಕೊಡಗು.ಇಂತಹ ಕೊಡಗು ಮೊದಲಿನ ಸ್ಥಿತಿಗೆ ಬರಲು ಐದಾರು ವರ್ಷ ಬೇಕಾಗಬಹುದು ನಮಗೆ ಕುಡಿಯುವ ನೀರು, ದೇಶಕ್ಕೆ ಸೈನಿಕರನ್ನ ಕೊಟ್ಟ ಕೊಡಗಿಗೆ ನಾವು ಮಾಡುತ್ತಿರುವುದು ಸಹಾಯವಲ್ಲ, ಅದು ನಮ್ಮ ಕರ್ತವ್ಯ ನಾವು ಕೊಡಗಿಗೆ ಬೆಂಗಳೂರು ಘಟಕದಿಂದ ಟ್ರಕ್ ನಲ್ಲಿ ಸಾಮಗ್ರಿಗಳನ್ನು ತೆಗೆದುಕೊಂಡು ನಾನೇ ಹೋಗುತ್ತೇನೆ ನಾಳೆ ಮಧ್ಯಾಹ್ನ 12 ಕ್ಕೆ ನ್ಯಾಶನಲ್ ಕಾಲೇಜಿನ ಗ್ರೌಂಡ್ ನಿಂದ ಹೊರಡಲಿದ್ದೇವೆ ಒಂದು ಕುಟುಂಬಕ್ಕೆ 15 ದಿನಕ್ಕಾಗುವಷ್ಟು ಎಲ್ಲ ದಿನೊಪಯೋಗಿ ವಸ್ತುಗಳ ಕಿಟ್ ಅನ್ನು ಬಿಜೆಪಿ ನಾಳೆ ತೆಗೆದುಕೊಂಡು ಹೋಗಲಾಗುತ್ತದೆ ಎಂದರು.
ಇಂದಿನ ಸಭೆಯಲ್ಲಿ ಒಟ್ಟು 11.5 ಲಕ್ಷ ರೂ. ಕಲೆಕ್ಟ್ ಆಗಿದೆ
ಇನ್ನು ಹೆಚ್ಚಿನ ಸಹಾಯವನ್ನ ಕಾರ್ಪೊರೇಟರ್ಸ್, ನಾವು ಮಾಡಲಿದ್ದೇವೆ ಬೆಂಗಳೂರು ಶಾಸಕರು, ಬಿಬಿಎಂಪಿ ಬಿಜೆಪಿ ಸದಸ್ಯರು ತಮ್ಮ ಎರಡು ತಿಂಗಳ ಸಂಬಳವನ್ನ ಕೊಡಲು ತೀರ್ಮಾನಿಸಿದ್ದೇವೆ ಕೇಂದ್ರ ಸಚಿವ ಅನಂತ ಕುಮಾರ್ ಒಂದು ಲೋಡ್ ಅಕ್ಕಿ, ಒಂದು ಲೋಡ್ ಬೇಳೆ ಕೊಡೊದಾಗಿ ಹೇಳಿದ್ದಾರೆ ನಮ್ಮಲ್ಲಿ ಈಗ 20ಕ್ಕೂ ಹೆಚ್ಚು ಲಾರಿಗಳ ಸಾಮಗ್ರಿಗಳು ರೆಡಿ ಇವೆ ಮಕ್ಕಳಿಗೆ ಬಟ್ಟೆ, ಅಕ್ಕಿ, ಬೇಳೆ, ರಗ್ಗು ಸೇರಿದಂತೆ ದಿನನಿತ್ಯ ಉಪಯೋಗಿಸುವ ವಸ್ತುಗಳನ್ನ ತೆಗೆದುಕೊಂಡು ಹೋಗ್ತೇವೆ ನಮ್ಮ ಸಂಬಳ ಅಲ್ಲಿ ಮನೆ ಕಟ್ಟಲು ಬಳಸಬಹುದಾಗಿದೆ ಎಂದರು.









