ಬೆಂಗಳೂರು: ಅಂತರ್ಜಿಲ್ಲಾ ಸಾರಿಗೆ ಸೇವೆ ಆರಂಭಗೊಂಡಿದ್ದು ಮೊದಲ ದಿನವಾದ ಇಂದು ಕೆಎಸ್ಆರ್ಟಿಸಿ ಯ 1500 ಬಸ್ ಗಳು ರಸ್ತೆ ಗಿಳಿದವು,ಬಹುತೇಕವಾಗಿ ಎಲ್ಲಾ ಜಿಲ್ಲೆಗಳಿಂದಲೂ ಬಸ್ ಸೇವೆ ನಡೆಸಲಾಯಿತು.
ಮೆಜೆಸ್ಟಿಕ್ ನಿಲ್ದಾಣದಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬಸ್ ಗಳು ಸಂಚಾರ ನಡೆಸಿದ್ದು ಪ್ರತಿ ಬಸ್ ನಲ್ಲಿ 30 ಪ್ರಯಾಣಿಕರ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಯಿತು.ಡ್ರೈವರ್,ಕಂಡಕ್ಟರ್ ಗೂ ಥರ್ಮಲ್ ಸ್ಕ್ರೀನಿಂಗ್ ನಡೆಸಿದ್ದು ನಂತರ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಬಸ್ ಹತ್ತಿಸಲಾಯಿತು.











