ಕೆಲಸ ಕಿತ್ಕೊಂಡು ಕಳ್ಳತನದ ದಾರಿ ತೋರಿದ ಕೊರೋನಾ!

0
8

ಕೊಡಗು: ಲಾಕ್ ಡೌನ್ ನಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಖಾಲಿ ಕೈಯಲ್ಲಿ ಕುಳಿತಿದ್ದಾರೆ. ಕೆಲಸ ಇಲ್ಲದೆ ಖಾಲಿ ಕೈಯಲ್ಲಿದ್ದ ಇಬ್ಬರು ಇದೀಗ ಸುಲಭವಾಗಿ ಹಣ ಗಳಿಸೋಕೆ ಕಳ್ಳತನದ ದಾರಿ ಹಿಡಿದುದು, ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಕೊರೋನಾ ದುಡಿಯುವ ಕೈಗಳಿಂದ ಕೆಲಸ ಕೊತ್ಕೊಂಡು ಬೇಡಿ ಹಾಕಿದೆ. ವಿರಾಜಪೇಟೆ ತಾಲೂಕಿನ ಕಡಂಗ ಗ್ರಾಮದ ಮಹೇಶ, ಭರತ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದರು. ಇದೀಗ ಲಾಕ್ ಡೌನ್ ನಿಂದ ಇವರ ಕೆಲಸಕ್ಕೂ ಕುತ್ತು ಬಂದಿದೆ. ಹೇಗಾದ್ರೂ ದುಡ್ಡು ಮಾಡಬೇಕು ಅಂತಾ ನಿರ್ಧರಿಸಿದ್ದ ಇಬ್ಬರೂ,ಮೇ.19ರಂದಿ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಯುವಕಪಾಡಿ ಗ್ರಾಮದ ಮಾಚವ್ವ ಮನೆಯಲ್ಲಿ ಬೀಗ ಹೊಡೆದು ಒಂದು ಲಕ್ಷದ ತೊಂಬತ್ತ ನಾಲ್ಕು ಸಾವಿರ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು. ಆದ್ರೆ ಕೇಸ್ ದಾಖಲಾದ ಮೂರೇ ದಿನಕ್ಕೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

ಲಾಕ್ ಡೌನ್ ನಿಂದ ಕೆಲಸ ಇಲ್ಲದೆ ಮನೆಯಲ್ಲಿ ಖಾಲಿ ಕೈಯಲ್ಲಿ ಕುಳಿತಿದ್ದ ಇಬ್ಬರು ಸುಲಭವಾಗಿ ಹಣ ಮಾಡೋಕೆ ಮುಂದಾಗಿದ್ದಾರೆ. ಮಾಚವ್ವ ಕಾಫಿ ತೋಟ ಸೇರಿದಂತೆ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಕೆಲಸ ಮಾಡ್ಕೊಂಡಿದ್ದ ಇವ್ರಿಗೆ ನಿರುದ್ಯೋಗ ಸಮಸ್ಯೆ ಕಾಡ್ತಾ ಇತ್ತು. ಜೊತೆ ಕೈಯಲ್ಲಿ ಕಾಸಿಲ್ಲದೆ ಖಾಲಿಯಾಗಿದ್ರು. ಮನೆ ಮಾಲೀಕರಾದ ಮಾಚವ್ವ ಲಾಕ್ ಡೌನ್ ಸಡಿಲ ಆದ್ಮೇಲೆ ಮಗನ ಮನೆಗೆ ಹೋಗಿದ್ರು. ಮೇ.19 ರಂದು ಹೋದ ಮಾಲೀಕರು ಮೇ. 26 ರಂದು ವಾಪಸ್ ಬಂದು ನೋಡುವಷ್ಟರಲ್ಲಿ ಶಾಕ್ ಕಾದಿತ್ತು. ಮನೆಯಲ್ಲಿದ್ದ 1 ಲಕ್ಷದ 94 ಸಾವಿರ ಮೌಲ್ಯದ ಚಿನ್ನಾಭರಣ ದೋಚಿರೋದು ಬೆಳಕಿಗೆ ಬಂದಿತ್ತು.. ಇದು ಮಾಲೀಕರಿಗೂ ಕೂಡ ಶಾಕ್ ಆಗಿ, ಬಳಿಕ ನಾಪೋಕ್ಲು ಠಾಣೆಗೆ ದೂರು ನೀಡಿದ್ರು..

ಈ ಪ್ರಕರಣದ ಬಳಿಕ ಕೊಡಗು ಜಿಲ್ಲೆ ಪೊಲೀಸರು ಸಾರ್ವಕನಿಕರಿಗೆ ಮನವಿಯೊಂದನ್ನ ಮಾಡಿದ್ದಾರೆ.. ಜನರು ಕೆಲಸ ಕಳೆದುಕೊಂಡು ಖಾಲಿ‌ ಕೈಯಲ್ಲಿ ಕುಳಿತಿದ್ದಾರೆ. ಇಂಥಹ ವೇಳೆಯೇ ಕಳ್ಳತನ ಪ್ರಕರಣಗಳು ಹೆಚ್ಚುತ್ತವೆ. ನಿರುದ್ಯೋಗ ಕಳ್ಳತನಕ್ಕೆ ಪ್ರೇರಣೆ ನೀಡ್ತಿರೋದು ಆತಂಕ. ಹೀಗಾಗಿಯೇ ಜನ ಈ ಟೈಂ ನಲ್ಲಿ ಎಚ್ಚರದಿಂದ ಇರಬೇಕು. ನೀವು ಮನೆ ಬಿಟ್ಟು ಹೋಗೋ ವೇಳೆ ಪೊಲೀಸ್ರ ಗಮನಕ್ಕೆ ತರಬೇಕು ಅಂತಾ ಮನವಿ ಮಾಡಿದ್ದಾರೆ.

- Call for authors -

LEAVE A REPLY

Please enter your comment!
Please enter your name here