ಹುಬ್ಬಳ್ಳಿ: ಮಹದಾಯಿ ನದಿ ನೀರು ಹಂಚಿಕೆಯಲ್ಲಿ ಕುಡಿಯುವ ನೀರಿಗಾಗಿ 5.4 ಟಿ ಎಮ್ ಸಿ ನೀರನ್ನು ಬಿಟ್ಟುರುವುದು ನಮಗೆ ಸಿಕ್ಕ ದೊಡ್ಡ ಗೆಲುವಲ್ಲ.ಬದಲಾಗಿ ಮಹದಾಯಿಯಲ್ಲಿ 188 ಟಿ ಎಮ್ ಸಿ ನೀರು ಇದೆ ಎಂದು ನ್ಯಾಯಾಧಿಕರಣ ಒಪ್ಪಿಕೊಂಡಿದ್ದು ನಮಗೆ ಸಿಕ್ಕಿರುವ ದೊಡ್ಡ ಜಯವಾಗಿದೆ ಎಂದು ಮಾಜಿ ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ.
ನ್ಯಾಯಾಧಿಕರಣದ ಆದೇಶ ರಾಜ್ಯ ಒಪ್ಪುವ ಹಾಗೆ ಬಂದಿಲ್ಲ,ಉತ್ತರ ಕರ್ಣಾಟಕ ಸಂಭ್ರಮ ಪಡುವ ಆದೇಶ ಇದಲ್ಲ.ಮಹದಾಯಿ ತೀರ್ಪು ನನಗೆ ಬೇಸರ ತಂದಿದೆ.188 ಟಿ ಎಮ್ ಸಿ ನೀರಿನಲ್ಲಿ ನಮಗೆ ನೀಡಿದ್ದು ಕೇವಲ 5.4 ಟಿ ಎಮ್ ಸಿ .ನ್ಯಾಯಾಧಿಕರಣ ನಡವಳಿಕೆ ನನಗೆ ಬೇಸರ ತಂದಿದೆ ಎಂದ್ರು.
ನ್ಯಾಯಾಧಿಕರಣ ಮೊದಲು ಆದೇಶ ನೀಡಬೇಕು ಬಳಿಕ ಸರ್ಕಾರಕ್ಕೆ ಆದೇಶದ ಪ್ರತಿ ಸಲ್ಲಿಸಬೇಕು .ಆದ್ರೆ ಸರ್ಕಾರಕ್ಕೆ ಮೊದಲು ವರದಿ ಸಲ್ಲಿಸಿ ಆದೇಶ ನೀಡಿದೆ.ಇದು ನ್ಯಾಯಾಧಿಕರಣಕ್ಕೆ ಶೋಭೆ ತರುವುದಿಲ್ಲ.ನಮ್ಮ ಬೇಡಿಕೆ ಹಾಗೆ ನೀರು ಹಂಚಿಕೆ ಆಗಿಲ್ಲ ಹಾಗಾಗಿ ಸಂಪೂರ್ಣ ಆದೇಶ ಪ್ರತಿ ಸಿಕ್ಕ ಬಳಿಕ ಮುಂದಿನ ಹೋರಾಟ ಮಾಡುವೆ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ಕೂಡಾ ನೀಡುವೆ ಎಂದ್ರು.









