ಬೆಂಗಳೂರು:ಭಾರತದಲ್ಲಿ ಅತೀ ಹೆಚ್ಚು ಪೂರ್ವಅವಧಿಯ ಶಿಶುಗಳು ಜನಿಸುತ್ತಿವೆ. ಸ್ತನ್ಯಪಾನ ಅವಧಿಪೂರ್ವ ಶಿಶುಗಳ ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುತ್ತದ್ದು,ಮಿಲ್ಕ್ ಬ್ಯಾಂಕ್ಗಳು ಸ್ತನ್ಯಪಾನ ಮಾಡಿಸಲಾಗದ ತಾಯಂದಿರ ಆಶಾಕಿರಣವಾಗಿವೆ ಎಂದು ಫೋರ್ಟಿಸ್ ಲಾ ಫೆಮ್ಮೆ ಆಸ್ಪತ್ರೆ ನಿರ್ದೇಶಕಿ ಡಾ.ಪ್ರತಿಮಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ರಿಚ್ ಮಂಡ್ ಟೌನ್ ನಲ್ಲಿರುವ ಆಸ್ಪತ್ರೆಯಲ್ಲಿ ಮಾತನಾಡಿದ ಡಾ.ಪ್ರತಿಮಾ ರೆಡ್ಡಿ, ಕರ್ನಾಟಕದಲ್ಲಿ 6 ತಿಂಗಳಿಗಿಂತ ಕಿರಿದಾಗಿರುವ ಶಿಶುಗಳಿಗೆ ಸ್ತನ್ಯಪಾನ ಪ್ರಮಾಣ ಕಳೆದ ಒಂದು ದಶಕದಲ್ಲಿ ಶೇ.4.4ರಷ್ಟು ಕುಸಿದಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಪ್ರಕಾರ 6 ತಿಂಗಳಿಗಿಂತ ಕೆಳಗಿನ ಶೇ.54.2ರಷ್ಟು ಶಿಶುಗಳಿಗೆ ಎಕ್ಸ್ಕ್ಲ್ಯೂಸೀವ್ ಆಗಿ ಸ್ತನ್ಯಪಾನವಾಗುತ್ತಿದೆ. 2005-06ರಲ್ಲಿ ಈ ಪ್ರಮಾಣ ಶೇ.58.6ರಷ್ಟಿತ್ತು.ಭಾರತದಲ್ಲಿ ಶೇ.55ರಷ್ಟು ಪ್ರಮಾಣವಿದೆ ಎಂದ್ರು.
ಕುಟುಂಬದ ಸದಸ್ಯರಲ್ಲಿ ಹಾಗೂ ಸಾರ್ವಜನಿಕವಾಗಿ ಆರೋಗ್ಯಯುತ ಸ್ತನ್ಯಪಾನ ಜಾಗೃತಿ ಮತ್ತು ಉತ್ತೇಜನ ಅವಶ್ಯಕವಾಗಿದೆ.‘ಮಕ್ಕಳಿಗೆ ಸ್ತನ್ಯಪಾನ ಅತ್ಯವಶ್ಯವೆಂದು ಹಲವರಿಗೆ ತಿಳಿದಿದ್ದರೂ, ಅವಧಿಪೂರ್ವ ಹಾಗೂ ಕಡಿಮೆ ತೂಕದ ಮಕ್ಕಳಿಗೆ ಸ್ತನ್ಯಪಾನ ಅತ್ಯವಶ್ಯ ಎಂಬ ಸಾಮಾನ್ಯ ಜ್ಞಾನವಿಲ್ಲ. ಭಾರತದಲ್ಲಿ ಅತೀ ಹೆಚ್ಚು ಪೂರ್ವಅವಧಿಯ ಶಿಶುಗಳು ಜನಿಸುತ್ತಿವೆ. ಭಾರತದಲ್ಲಿ 3.5 ಮಿಲಿಯನ್ ಶಿಶುಗಳು ಅವಧಿಪೂರ್ವವಾಗಿ ಜನಿಸಿವೆ. ಸ್ತನ್ಯಪಾನ ಅವಧಿಪೂರ್ವ ಶಿಶುಗಳ ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುತ್ತದೆ. ಮಿಲ್ಕ್ ಬ್ಯಾಂಕ್ಗಳು ಸ್ತನ್ಯಪಾನ ಮಾಡಿಸಲಾಗದ ತಾಯಂದಿರ ಆಶಾಕಿರಣ. ಅಮರ ಮಿಲ್ಕ್ ಬ್ಯಾಂಕ್ ಬೆಂಗಳೂರು ಮತ್ತು ದಿಲ್ಲಿಯಲ್ಲಿ ಇಂಥ ಜನರಲ್ಲಿ ದೊಡ್ಡ ಬದಲಾವಣೆ ತಂದಿದೆ’ ಎಂದ್ರು.
ಮುಂಚಿತವಾಗಿ ಎದೆಹಾಲು ಕುಡಿಸುವುದು ಡಯೇರಿಯಾ ಮತ್ತು ನ್ಯುಮೇನಿಯಾಗಳಿಂದ ಸಂಭವಿಸುವ ಸಾವನ್ನು ತಪ್ಪಿಸುತ್ತದೆ. ಸೂಕ್ತವಾದ ಎದೆಹಾಲು ಸಿಗದೆ ಮಕ್ಕಳು ಸಾಯುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ತಾಯಿ ಹಾಲನ್ನು ಫ್ರೀಜರ್ನಲ್ಲಿ -20ಡಿಗ್ರಿ ಸೆಲ್ಸಿಯಸ್ನಲ್ಲಿ 6 ತಿಂಗಳು ಸಂಗ್ರಹಿಸಿಡಬಹುದು. ಕೋಣೆಯ ತಾಪಮಾನದಲ್ಲಿ 3-4 ಗಂಟೆಗಳ ಕಾಲ ಬಳಸಬಹುದು ಎಂದ್ರು.
‘ಮಹಿಳೆಯರ ಆರೋಗ್ಯ ಕೇಂದ್ರಿತ ಸಂಸ್ಥೆಯಾಗಿ ಸ್ತನ್ಯಪಾನ ಉತ್ತೇಜಿಸುವುದು ನಮ್ಮ ಕರ್ತವ್ಯ. ಯುನಿಸೆಫ್ ವರದಿ ಪ್ರಕಾರ ಭಾರತದಲ್ಲಿ ಸ್ತನ್ಯಪಾನ ಪ್ರಮಾಣ ಶೇ.41.5ರಷ್ಟಿದ್ದು, ಫೋರ್ಟಿಸ್ ಲಾಫೆಮ್ಮೆಯಲ್ಲಿನ ನಮ್ಮ ಎಲ್ಲ 4 ಘಟಕಗಳಲ್ಲಿ ಶೇ.80ರಷ್ಟಿದೆ. ಬೆಂಗಳೂರು ಘಟಕದಲ್ಲಿ ಸ್ತನ್ಯಪಾನ ಪ್ರಮಾಣ ಶೇ.89ರಷ್ಟಿದೆ. ಸರ್ಕಾರ ಕೂಡ ಸ್ತನ್ಯಪಾನ ಉತ್ತೇಜನಕ್ಕೆ ನೀತಿನಿಯಮಗಳನ್ನು ಸಿದ್ಧಪಡಿಸುತ್ತಿದೆ. ನಮ್ಮ ಆಸ್ಪತ್ರೆಯಲ್ಲಿ ಸ್ತನ್ಯಪಾನ ಸಲಹೆಗೆ ತರಬೇತಿ ಹೊಂದಿರುವ ಕೌನ್ಸಿಲರ್ಗಳಿದ್ದಾರೆ. ಹೊರಗಿನ ರೋಗಿಗಳಿಗೆ ಸ್ತನ್ಯಪಾನ ಕುರಿತು ಮಾಹಿತಿ ಒದಗಿಸುವ ಸಂಘಗಳಿವೆ. ನಾವು ಎಲ್ಲ ದಿಸೆಯಿಂದಲೂ ಮಹಿಳೆಯರಿಗೆ ಸಹಾಯ ಮಾಡುತ್ತಿದ್ದೇವೆ ಎಂದ್ರು.
ಸ್ತನ್ಯಪಾನದಿಂದ ಮಕ್ಕಳಿಗೆ ಹಲವು ಲಾಭಗಳಿವೆ. ಮಕ್ಕಳಿಗೆ ಅಗತ್ಯ ಎಲ್ಲ ಪೌಷ್ಠಿಕಾಂಶಗಳನ್ನು ಹೊಂದಿರುತ್ತದೆ. ಸುಲಭವಾಗಿ ಜೀರ್ಣವಾಗುತ್ತದೆ. ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ತಾಯಿ ಹಾಗೂ ಮಗುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ ಎಂದ್ರು.
ಫೋರ್ಟಿಸ್ ಲಾಫೆಮ್ಮೆ ಆಸ್ಪತ್ರೆಯ ಡಾ.ಶ್ರೀನಾಥ್ ಮಣಿಕಂಟಿ ಮಾತನಾಡಿ, ಈವರೆಗೂ 269 ಲೀಟರ್ ಹಾಲು ಸಂಗ್ರಹಿಸಲಾಗಿದೆ. ಈ ಪೈಕಿ 229 ಲೀಟರ್ ಹಾಲನ್ನು ಅಗತ್ಯವಿರುವ ಶಿಶುಗಳಿಗೆ ಒದಗಿಸಲಾಗಿದೆ.ಆರು ತಿಂಗಳಿಗಿಂತ ಕಡಿಮೆಯಿರುವ ಹಾಗೂ ಒಂದು ಕೆ.ಜಿ. ತೂಕ ಕಡಿಮೆ ಇರುವ ಶಿಶುವಿಗೆ ತಾಯಿ ಎದೆ ಹಾಲು ಅಗತ್ಯವಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಶಿಶುವಿಗೆ ಅಮರ ಮಿಲ್ಕ್ ಬ್ಯಾಂಕ್ ವತಿಯಿಂದ ಉಚಿತವಾಗಿ ಹಾಲು ಒದಗಿಸುವ ಕೆಲಸ ಮಾಡುತ್ತಿದೆ. ಅನ್ಯರಿಗೆ ಪ್ರತಿ ಎಂಎಎಲ್ ಗೆ 2 ರೂ. ನಿಗದಿಪಡಿಸಲಾಗಿದೆ. ಈವರೆಗೂ 62 ಮಂದಿ ತಾಯಂದಿರು ತನ್ನ ಎದೆಹಾಲನ್ನು ದಾನ ಮಾಡಿದ್ದಾರೆ ಎಂದ್ರು.
ಡಾ.ಅರುಣಾ ಮುರುಳೀಧರ್ ಮಾತನಾಡಿ, ಹಾಲು ದಾನ ಮಾಡಿದರೆ ತಮ್ಮ ಮಗುವಿಗೆ ಹಾಲಿನ ಕೊರತೆಯಾಗಲಿದೆ ಎನ್ನುವುದು ತಪ್ಪು ಕಲ್ಪನೆ.ಹಾಗಾಗಿ ಎದೆಹಾಲು ದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ್ರು.









