ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ನೆಸ್ ಚಾಲೆಂಜ್ ಇದೀಗ ವೈರಸ್ ರೀತಿ ದೇಶಾದ್ಯಂತ ಹರಡಿದ್ದು,ರಾಜಕಾರಣಿಗಳ ನಂತರ ಇದೀಗಅಧಿಕಾರಿಗಳೂ ಚಾಲೆಂಜ್ ಸ್ವೀಕರಿಸಿ ಸಾಮರ್ಥ್ಯ ತೋರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಯಸ್,ಈಗ ಮೋದಿ ಚಾಲೆಂಜ್ ಸ್ವೀಕರಿಸಿರುವ ಅಧಿಕಾರಿ ರಾಜ್ಯ ಗೃಹಮಂಡಳಿ ವ್ಯವಸ್ಥಾಪಕ ನಿರ್ದೇಶಕರಾದ ಹಿರಿಯ ಐಪಿಎಸ್ ಅಧಿಕಾರಿ ಕಿಶೋರ್ ಚಂದ್ರ.ಈ ಅಧಿಕಾರಿ ವ್ಯಾಯಾಮ ಮಾಡುತ್ತಿರುವ ನಾಲ್ಕು ನಿಮಿಷದ ವಿಡಿಯೋವನ್ನು ಎಡಿಜಿಪಿ ಪ್ರತಾಫ್ ರೆಡ್ಡಿ ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.ಆ ಮೂಲಕ ಮೋದಿ ಫಿಟ್ನೆಸ್ ಚಾಲೆಂಜ್ ಗೆ ಉತ್ತರ ನೀಡಿದ್ದಾರೆ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಮೋದಿ ರಾಜ್ಯದ ಸಿಎಂ ಹಾಗೂ 40 ವರ್ಷ ಮೀರಿದ ಐಪಿಎಸ್ ಅಧಿಕಾರಿಗಳಿಗೆ ಸವಾಲಾಕಿದ್ರು ಮೋದಿ ಸವಾಲಿಗೆ 59 ವರ್ಷದ ಕಿಶೋರ್ ಚಂದ್ರ ತಮ್ಮ ಪಿಟ್ನೆಸ್ ಸಾಮರ್ಥ್ಯ ತೋರಿದ್ದಾರೆ.









