ಮುಂಬಯಿ: ಲೈಟ್ ಆಫ್ ಏಷ್ಯಾ ರೆಸ್ಟೋರೆಂಟ್ ಕಟ್ಟಡದಲ್ಲಿ ಇಂದು ಬೆಳಗಿನ ಜಾವ 4.30 ರ ವೇಳೆಗೆ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸಲು ತೆರಳಿದ್ದ ಇಬ್ಬರು ಅಗ್ನಿ ಶಾಮಕ ದಳದ ಸಿಬಂದಿಗಳು ಏಣಿಯಿದ್ದ ಬಿದ್ದು ಗಾಯಗೊಂಡಿದ್ದಾರೆ.
ಮುಂಬಯಿ ಬಂದರು ಪ್ರದೇಶದ ಪಟೇಲ್ ಚೆಂಬರ್ಸ್‌ನ ಲೈಟ್ ಆಫ್ ಏಷ್ಯಾ ರೆಸ್ಟೋರೆಂಟ್ ಕಟ್ಟಡದಲ್ಲಿ ಇಂದು ಮುಂಜಾನೆ ಭಾರೀ ಬೆಂಕಿ ಕಾಣಿಸಕೊಂಡಿದೆ. ಘಟನೆ ಸಂಬಂಧ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ 15 ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳು ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಟ್ಟಡ ಸಂಪೂರ್ಣ ಹಾನಿಯಾಗಿದ್ದು ಒಂದು ಭಾಗ ಕುಸಿದು ಬಿದ್ದಿದೆ.
5 ಅಂತಸ್ತಿನ ಕಟ್ಟಡ ಇದಾಗಿದ್ದು. ಅಪಾಯಕಾರಿ ಕಟ್ಟಡಗಳ ಸಾಲಿಗೆ ಇದು ಸೇರಿತ್ತು. ಮುಂಬಯಿಯ ಜನನಿಭಿಡ ಸ್ಥಳದಲ್ಲಿ ಕಟ್ಟಡವಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಕಟ್ಟಡ ತೆರವುಗೊಳಿಸದಿದ್ದಲ್ಲಿ ಸಾರ್ವಜನಿಕರಿಗೆ ಅಪಾಯವಿದೆ.









